ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೊದಗಿದ ಗತಿ
'ಧೂಳಿನಿಂದ ಎದ್ದು ಬರುತ್ತೇನೆ' ಎಂದು ಗಾಳಿಪಟ ಹಾರಿಸಿದವರ ಪಕ್ಷದ್ದೂ ಇದೇ ಸ್ಥಿತಿ
ಗುಡಿಸಿ ಸ್ವಚ್ಛಗೊಳಿಸುತ್ತೇವೆಂದವರ ಪಕ್ಷವನ್ನು ಗುಡಿಸಿ ಒಗೆದ ರೀತಿ
ಇನ್ನಿಲ್ಲದಂತೆ 'ಇನ್ನಿಲ್ಲ'ವಾಗುವಿಕೆ
ಇಡುಗಂಟು ಸ್ವತ್ತಿಗೇ ಕುತ್ತು ಬಂದಾಗ..
ಬುಡ ಸಮೇತ ಕಿತ್ತು ಹಾಕಿ ಕುತ್ತು ಉಂಟು ಮಾಡುವಿಕೆ
ಅಸ್ತಿತ್ವವನ್ನು ನಾಸ್ತಿಯಾಗಿಸುವುದಕ್ಕೆ ಈ ಹೆಸರು
(ಅಬಲರ ಮೇಲೆ ಪ್ರಬಲರು) ದಾಳಿ ಮಾಡಿ ಗೋಳಿಡುವ ಸ್ಥಿತಿಗೆ ತಲುಪಿಸುವುದೇ ಧೂಳೀಪಟ
ಕುತಂತ್ರದ ದಾಳ ಒಗೆದು ಉಂಟು ಮಾಡುವ ಪರಿಣಾಮ
ಚಿಂದಿ ಚಿತ್ರಾನ್ನಕರಣ
-ವಿಶ್ವನಾಥ ಸುಂಕಸಾಳ
vishwasunkasal@yahoo.com