ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಮೇ 12ರ ಪುಟ 4ರಲ್ಲಿ ...

Rashmi Kasaragodu
Updated On : 9 Jun 2014, 11:59 am

ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಮೇ 12ರ ಪುಟ 4ರಲ್ಲಿ 'ಚುನಾವಣೆ ಸಂವಿಧಾನ ವಿರೋಧಿ' ಎಂಬ ಶೀರ್ಷಿಕೆ ಇದೆ. ಈ ಶೀರ್ಷಿಕೆ ಗಮನಿಸಿದ ತಕ್ಷಣ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿರುವ ಚುನಾವಣೆಯೇ ಸಂವಿಧಾನ ವಿರೋಧಿ ಎಂಬ ಅರ್ಥ ಬರುತ್ತದೆ. ಅಲ್ಲದೇ ಈ ಸುದ್ದಿಯ ವಿಶ್ಲೇಷಣೆಯಲ್ಲಿ 'ಅಜಂಖಾನ್ರವರು ನರೇಂದ್ರ ಮೋದಿಯವರನ್ನು ಫಲಿತಾಂಶದ ಮೊದಲೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದರಿಂದ ಚುನಾವಣೆ ಸಂವಿಧಾನ ವಿರೋಧಿ' ಎಂದು ಟೀಕಿಸಿದ್ದಾರೆ ಎಂದಿದೆ. ಹಾಗಾಗಿ ಶೀರ್ಷಿಕೆಯಲ್ಲಿ ಮತ್ತು ಸುದ್ದಿ ವಿಶ್ಲೇಷಣೆಯಲ್ಲಿ 'ಈ ಬಾರಿಯ ಚುನಾವಣೆ ಸಂವಿಧಾನ ವಿರೋಧಿ' ಎಂದಿದ್ದರೆ ಸೂಕ್ತವಾಗಿರುತ್ತಿತ್ತು.'
'ಮೇ 18ರ ಪುಟ 8ರಲ್ಲಿ ಪ್ರತಿಷ್ಠಿತ ಕ್ಷೇತ್ರಗಳ ಫಲಿತಾಂಶಗಳ ಸುದ್ದಿಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಬಿ.ಎಸ್. ಯಡಿಯೂರಪ್ಪ ಜಯಗಳಿಸಿದ್ದಾರೆ ಎಂದಿದೆ. ಆದರೆ ಯಡಿಯೂರಪ್ಪನವರು ಲೋಕಸಭೆಗೆ ಸ್ಪರ್ಧಿಸಿದ್ದು ಇದೇ ಮೊದಲಲ್ಲ. 1991ರಲ್ಲಿಯೇ ಅವರು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಆಗ ರಾಜೀವ್ ಗಾಂಧಿ ಹತ್ಯೆಯ ನಂತರದ ಚುನಾವಣೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಪರ ಅನುಕಂಪದ ಅಲೆ ಇದ್ದುದರಿಂದ ಆ ಚುನಾವಣೆಯಲ್ಲಿ ಯಡಿಯೂರಪ್ಪನವರು ಪರಾಭವಗೊಂಡಿದ್ದರು.'
'ಮೇ 11ರ ಭಾನುವಾರದ ಗೋಡೆಬರಹದಲ್ಲಿ ನನ್ನ ಬರಹದ ಕೊನೆಯಲ್ಲಿ 'ಅಬ್ ಕಿ  ಬಾರ್ ಟ್ವಿಟರ್ ಸರ್ಕಾರ್' ಎಂಬ ಶೀರ್ಷಿಕೆಯ ಬದಲಾಗಿ 'ಅಬ್ ಕರಿ ಬಾರ್ ಟ್ವಿಟರ್ ದರ್ಬಾರ್' ಎಂಬ ಶೀರ್ಷಿಕೆಯನ್ನು ನೀಡಿದ್ದರೆ ತರ್ಕಬದ್ಧವಾಗಿರುತ್ತಿತ್ತು ಎಂದಿದೆ. ಆದರೆ ನಾನು ಬರೆದಿದ್ದು 'ಅಬ್ ಕೀ ಬಾರ್ ಟ್ವಿಟರ್ ದರ್ಬಾರ್ ಎಂದು. ಮುದ್ರಣ ದೋಷದಿಂದ 'ಅಬ್ ಕೀ ಬಾರ್' ಎಂಬುದು 'ಅಬ್ ಕರೀ ಬಾರ್' ಎಂದಾಗಿದೆ.'
'ಮೇ 13ರ 'ಬೈಟುಕಾಫಿ'ಯ ಮುಖಪುಟದಲ್ಲಿನ 'ತರಕಾರಿ ಹಿರಿಯ ಪ್ರಾಥಮಿಕ ಶಾಲೆ!' ಎಂಬ ಲೇಖನದಲ್ಲಿ 'ತರಕಾರಿಗಳ ಚಿತ್ರ ನೋಡಿ ಕಲಿಯುವ ಬದಲು ನೈಜವಾಗಿ ಮೂಡಿ ಕಲಿಯುತ್ತಿದ್ದಾರೆ' ಎಂದಿದೆ. ಇದರಲ್ಲಿ 'ನೈಜವಾಗಿ ನೋಡಿ ಕಲಿಯುತ್ತಿದ್ದಾರೆ' ಅಥವಾ 'ನೈಜವಾಗಿ ಬೆಳೆದು ಕಲಿಯುತ್ತಿದ್ದಾರೆ' ಎಂದಿದ್ದರೆ ಸೂಕ್ತವಾಗುತ್ತಿತ್ತು.'
'ಪುಟ 2ರಲ್ಲಿ ಬನ್ನಿ ಮಂಟಪದಲ್ಲಿನ 'ನಾಟಕ ಗತಿ' ಎಂಬ ವಿಷಯದಲ್ಲಿ 'ಸರಸ್ಯ ಅಪರ್ಸುವ ಅನನ್ಯ ಅಭಿನಯಿಸುವ ನಾಟಕ 'ಗತಿ' ಎಂದಿದೆ. ಇದರಲ್ಲಿನ ಸರಸ್ಯ ಅಪರ್ಸುವ ಎಂಬುದು ಸರಸ್ವತಿ ಅರ್ಪಿಸುವ ಎಂದಾಗಬೇಕಿತ್ತೆಂಬುದು ನನ್ನ ಊಹೆ. ಪುಟ 11ರಲ್ಲಿ 'ಧರ್ಮಪ್ರಜ್ಞೆಯಿಂದ ಸದೃಢ ದೇಶ' ಎಂಬ ಸುದ್ದಿಯಲ್ಲಿನ 5ನೇ ಪ್ಯಾರಾದಲ್ಲಿ ಸಂಸದ ಬಿ.ವೈ. ರಾಘವೇಂದ್ರರವರು ಮಾತನಾಡಿ ಯಡಿಯೂರಪ್ಪನವರ ತಾರತಮ್ಯಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಅನುದಾನ ನೀಡಿದ್ದು, ಎಂದಿದೆ. ಆದರೆ ಇದು ಯಡಿಯೂರಪ್ಪನವರು ತಾರತಮ್ಯಕ್ಕೆ ಅವಕಾಶ ಇಲ್ಲದ ರೀತಿಯಲ್ಲಿ ಅನುದಾನ ನೀಡಿದ್ದು ಎಂದಾಗಬೇಕಿತ್ತು' ಎಂದಿದ್ದಾರೆ.


- ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement