ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮಾತನಾಡುವುದೂ ಒಂದು ಕಲೆಯೇ?
ಮಾತನಾಡದಿರುವುದೂ ಒಂದು ಕಲೆ ಅಂತ ಮನಮೋಹನ ಸಿಂಗ್ ತೋರಿಸಿಕೊಟ್ಟಿದ್ದಾರೆ!
ಕೌಶಿಕ್‌ರಾಜ್, ಹನುಮನಾಳು
ಲವ್ ಎಂಬುದು ವಿಷ ಅಂತ ಗೊತ್ತಿದ್ದರೂ ಲವ್‌ನಲ್ಲಿ ಬೀಳುತ್ತಾರೇಕೆ?
ಅದೊಂಥರ ಹಿತಕರವಾದ ವಿಷ.
ನೇತ್ರಾ ಆನೆಕೆರೆಬೀದಿ, ಮಂಡ್ಯ, 8970452188
ತಾಯಿ, ತಂದೆಗೆ ಅನ್ನ ನೀಡದ ಅದೆಷ್ಟೋ ಜನ ದೇವಸ್ಥಾನದ ಮುಂದೆ ಅನ್ನದಾನ ಮಾಡುವುದೇಕೆ?
ದೇವರಿಗೆ ನೇರವಾಗಿ ಕಾಣಲೆಂದು!
ಲಕ್ಷ್ಮೀ ಬರ್ಕಲಿರಮೇಶ, ಮಂಡ್ಯ, 9538786537
ಕೆಲವರು ಪಶುಗಳಂತೆ ಬದುಕಲು ಇಷ್ಟಪಡುವುದೇಕೆ?
ಪಶುಸಂಗೋಪನೆಗೆ ಸಚಿವಾಲಯವಿದೆ, ಮನುಷ್ಯಸಂಗೋಪನೆಗೆ ಇಲ್ಲ ಅಂತ!
-ಬಾಣಭಟ್ಟ