ವಿ. ಹೇಮಂತ್‌ಕುಮಾರ, ಬೆಂಗಳೂರು, 9901739104
ಒಂದು ಕಿಸ್‌ಗೆ ಸಾವಿರ ಕೊಡ್ತೀನಿ ಅಂತಾಳಲ್ಲ?
ಮುತ್ತಿನಂಥ ಆಫರ್ ಅಂದ್ರೆ ಇದೇ ನೋಡು!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಮುಖದ ತುಂಬ ದಾಡಿಬಿಟ್ಟವರೆಲ್ಲ ಬುದ್ಧಿವಂತರಾ?
ಕೆಲವರು ಶೇವ್ ಮಾಡಲೂ ಆಗದ ಆಲಸಿಗಳು ಎಂದೂ ಕರೆಯುತ್ತಾರೆ!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅಂತಾರಲ್ಲ ಯಾಕೆ?
ಹೆಚ್ಚುಕಡಿಮೆಯಾದ್ರೆ ಟಿವೀಲಿ ಇಡೀ ದಿನ ತೋರಿಸ್ತಾರೆ ಅದಕ್ಕೆ!
ವಾದಿರಾಜ ಜಿ. ರಾಯ್ಕರ, ಬೆಂಗಳೂರು
ಭಟ್ರೇ ಅನಂತಮೂರ್ತಿಯವರಿಗೆ ಏನ್ ಆಗಿದೆ ಅಥವಾ ಆಗ್ತಾ ಇದೆ? ನಿಮಗೇನಾದ್ರೂ ಗೊತ್ತಾ?
ಕೆಲವೊಮ್ಮೆ ಅವರಿಗೇ ಗೊತ್ತಾಗಲ್ವಂತೆ!
ಬಾಣಭಟ್ಟ