ಮಾತಿನ ಲೇಪ ಇರುವುದೆಲ್ಲ ಆಲಾಪವೇ
ಹುಡುಗರಷ್ಟೇ ಇರುವಾಗ ವಿನಿಮಯವಾಗುವ ಅಶ್ಲೀಲ ಮಾತುಗಳೆಲ್ಲ ದುರಾಲಾಪ
ಕಟ್ಟೆ ಮೇಲೆ ಕುಳಿತು ಕಟ್ಟೆ ಪಂಚಾಯ್ತಿ ಮಾಡಿದರೆ ಅದು ವಾರ್ತಾಲಾಪ
ವಾರ್ತಾವಾಚಕ ಸ್ಥಾನಕ್ಕೆ ಏಕೆ ಹೆಂಗಸರನ್ನೇ ಆಯ್ಕೆ ಮಾಡುತ್ತಾರೆಂದರೆ ಅವರು ವಾರ್ತಾಲಾಪದಲ್ಲಿ ನಿಪುಣರು
ವಿಪ್ರನ ವಿಪ್ರಲಾಪವನ್ನು ವಿಪ್ರಾಲಾಪ ಎನ್ನಬಹುದು
ಆಲಾಪದಲ್ಲಿ ದೋಷವಿತ್ತು ಎನ್ನುವಂಥ ಮಾತುಗಳೆಲ್ಲ ಆಕ್ಷೇಪ
ಗಾಯಕರು ಶ್ರೋತೃಗಳನ್ನು ನಿದ್ರಾ ಲೋಕಕ್ಕೆ ಕರೆದೊಯ್ಯಲು ನಡೆಸುವ ಆರಂಭಿಕ ಸಿದ್ಧತೆಯೇ ಆಲಾಪ
ಕಲಾಪ ಶುರುವಾದೊಡನೆ ಶುರುವಾಗುವ ಜನಪ್ರತಿನಿಧಿಗಳ ಪ್ರಲಾಪ
ಲೋಪ-ದೋಷಗಳ ಬಗ್ಗೆಯೇ ಆಡುವ ಮಾತುಗಳು
ಟೈಂ ಪಾಸ್ ಮಾಡಲೆಂದು ಇರುವ ಪಾಸ್
ವಿಶ್ವನಾಥ ಸುಂಕಸಾಳ