ಚಿರಪ್ರಭ, ನಂಜನಗೂಡು
ರಾಜ್ಯದಲ್ಲಿ ಇಡೀ ಸರ್ಕಾರಿ ವ್ಯವಸ್ಥೆ ಜಾತಿ ಹೆಸರಿನಲ್ಲಿ ಚಿಂದಿ ಚಿತ್ರಾನ್ನವಾಗುತ್ತಿದೆಯಲ್ಲಾ?
ಚಿತ್ರಾನ್ನ ಆದ್ರೆ ಅದನ್ನು 2 ರೂಪಾಯಿಗೆ ಹಂಚಿದ್ರಾಯ್ತು ಅಂದ್ರಂತೆ ಸಿದ್ದರಾಮಯ್ಯ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮನುಷ್ಯನಿಗೆ ಕಾಮವೇ ಇರದೇಹೋಗಿದ್ರೆ?
ಪಾಪ ವಾತ್ಸಾಯನ ಯೋಗದ ಬಗ್ಗೆ ಪುಸ್ತಕ ಬರೆಯಬೇಕಿತ್ತು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಮೂರ್ತಿಯವರು ದೇವರ ಮೂರ್ತಿಮೇಲೆ ಮೂತ್ರ ಮಾಡುತ್ತಿದ್ದಾಗ, ಕಲಬುರ್ಗಿಯವರು ಲೈಟ್‌ಕಂಬ ಹುಡುಕುತ್ತಿದ್ದರಂತೆ?
ಹಿರಿಯರಾದರೂ ಶೌಚಾಲಯಕ್ಕೆ ಹೋಗುವ ರೂಢಿಯಿಲ್ಲ ಎಂಬುದು ಜಗಜ್ಜಾಹೀರಾಯಿತು.
ವಿ. ಹೇಮಂತಕುಮಾರ, ಬೆಂಗಳೂರು, 9901739104
ಶ್ರೀಮಂತ ಕನ್ಯೆಯೊಬ್ಬಳು ಶ್ರೀಮತಿ ಆಗ್ತೀನಿ ಅಂತ ಪೀಡಿಸ್ತಿದಾಳೆ?
ಅಮ್ಮಾವ್ರ ಗಂಡ ಆಗೋಕೆ ರೆಡಿಯಾಗು.
ಬಾಣಭಟ್ಟ