ಆಚಾರವೇ ಸ್ವರ್ಗ, ಅಪಚಾರವೇ ನರಕ
ಚಾರಣಕ್ಕೆ ಹೋದಾಗ ಮಾಡಿದ ಅನಾಚಾರ
ಉಪಚಾರ ಮಾಡಿದವರಿಗೇ ಎರಡು ಬಗೆಯುವುದು
ಇಟ್ಟ ಚೂರು ನಂಬಿಕೆಯನ್ನೂ ಚೂರು ಚೂರು ಆಗುವಂತೆ ನಡೆದುಕೊಳ್ಳುವಿಕೆ
ದೇಶದ ಅನ್ನ ಉಂಡವರೇ ದೇಶದ ಒಡಲಲ್ಲಿ ಬಾಂಬ್ ಇಡುತ್ತಾರಲ್ಲಾ ಅದೇ ಇದು
ಅಪ ಪ್ರಚಾರ ಮಾಡುವುದೂ ಅಪಚಾರವೇ
ಆಚಾರದ ಹೆಸರಲ್ಲಿ ವಿಚಾರ ಹೀನ ಕೃತ್ಯವೆಸಗುವುದು
ಬಾಯಲ್ಲಿ ದೋಹಾ ಹೇಳುತ್ತಾ ಕೈಯ್ಯಲ್ಲಿ ದ್ರೋಹ ಬಗೆಯುವುದು
ವಾಸ ಮಾಡಿದ ಮನೆಗೇ ಮೋಸ ಮಾಡುವುದು
ಆಚಾರಿ ಅಥವಾ ಆಚಾರ್ಯ ಮಾಡಿದ ಅನಾಚರಣೆ
ಗೌರವ ತೋರದೇ ಕೌರವ ಕೃಷ್ಣನಿಗೆ ಮಾಡಿದ್ದು ಇದೇ
ಚರಿತಾರ್ಥವಾದ ಮೇಲೆ ಚಾರಿತ್ರ್ಯದ ಬಗ್ಗೆಯೇ ಸಂಶಯಿಸುವುದು
ಪಾಪಕ್ಕೆ ಕಾರಣವಾಗುವ ಪಾಪಾಚಾರ
ವಿಶ್ವನಾಥ ಸುಂಕಸಾಳ