ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಮತ ಹಾಕುವ ಪ್ರಜೆ ಪ್ರಭುವಾಗುವುದು ಯಾವಾಗ?
ಐದು ವರ್ಷಕ್ಕೊಮ್ಮೆ ಮಾತ್ರ!
ಬರ್ಕಲಿರಮೇಶ, ಮಂಡ್ಯ, 9008741348
ರಾತ್ರಿಯಾದ ನಂತರ ಪಕ್ಕದಲ್ಲಿ ಹೆಂಡತಿ ಇಲ್ಲವೆಂದರೆ ಬದುಕಿಗೆ ಏನರ್ಥ?
ಕಾದಿದೆ ಅನರ್ಥ!
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಗುಡುಗುವ ನರೇಂದ್ರಮೋದಿಗೂ ನಡುಗುವ ಮನಮೋಹನ ಸಿಂಗ್‌ಗೂ ವ್ಯತ್ಯಾಸವೇನು?
ಒಂದು ವೈಬ್ರೇಷನ್ ಮೋಡ್, ಇನ್ನೊಂದು ವೈಬ್ರಂಟ್ ಮೋಡ್!
ತಲವಾಟ ಮಂಜುನಾಥ, ಸಾಗರ, 9480931611
ಭ್ರಷ್ಟಾಚಾರಕ್ಕೂ ಅತ್ಯಾಚಾರಕ್ಕೂ ಇರುವ ವ್ಯತ್ಯಾಸವೇನು?
ಒಂದು ಲಂಚಕ್ಕೆ ಸಂಬಂಧಿಸಿದ್ದು, ಇನ್ನೊಂದು ಮಂಚಕ್ಕೆ ಸಂಬಂಧಿಸಿದ್ದು!
- ಬಾಣಭಟ್ಟ