ಸಂಪಾದಕೀಯ

ಗಾಂಧೀಜಿಯ ಚಿತಾಭಸ್ಮಕ್ಕೆ ನಮಿಸಿದಾಗ...

ಮಹಾತ್ಮ ಗಾಂಧಿಯವರ ಹತ್ಯೆಯಾಗಿ ಕೆಲದಿನ ಕಳೆದಿತ್ತು. ಎಲ್ಲೆಲ್ಲೂ ಗಾಂಧೀಜಿಯವರ ಸಾವಿಗಾಗಿ ಜನ ದುಃಖ ಪಡುತ್ತಿದ್ದರು. ಅವರ ಚಿತಾಭಸ್ಮವನ್ನು ದೇಶದ ಪವಿತ್ರ ನದಿಗಳಲ್ಲಿ ವಿಸರ್ಜಿಸಲು ಎಲ್ಲ ಏರ್ಪಾಡೂ ನಡೆದಿತ್ತು. ಅದಕ್ಕಾಗಿ ವಿಶೇಷ ರೈಲುಗಳನ್ನು ರಾಜಧಾನಿಯಿಂದ ಏರ್ಪಾಟು ಮಾಡಿದ್ದರು. ಅಂತಹ ರೈಲುಗಳಲ್ಲಿ ಒಂದು ನಾಸಿಕ್‌ಗೆ ತೆರಳುತ್ತಿದ್ದ "ರಕ್ಷಾ ಸ್ಪೆಷಲ್‌" ಎಂಬ ರೈಲು. ಅದರ ಮೇಲ್ವಿಚಾರಣೆ ಮತ್ತು ಜವಾಬ್ದಾರಿ ಹರಿಭಾವೂ ಖೇರ್ಕರ್ ಎಂಬ ಗಾರ್ಡ್‌ನದು. ಅವನಿಗೆ ಗಾಂಧೀಜಿಯೆಂದರೆ ಮಹಾ ಗೌರವ. ಅವರು ಅವನ ಪಾಲಿನ ದೇವರು. ಅವರ ಚಿತಾಭಸ್ಮವನ್ನಿಟ್ಟಿದ್ದ ಕರಂಡಕ ಅವನ ಪಾಲಿಗೊಂದು ಅಮೂಲ್ಯ ವಸ್ತುವಷ್ಟೇ ಅಲ್ಲ, ಪವಿತ್ರವಾದುದು. ಅದೂ ತನ್ನ ರೈಲುಗಾಡಿಯಲ್ಲಿ ಪ್ರಯಾಣ ಬೆಳಸುವುದೆಂದರೆ ಅದು ತನ್ನ ಪುಣ್ಯವೆಂದೇ ಎಣಿಸಿದ್ದ. ಅದಕ್ಕೆ ಗೌರವ ಸೂಚಿಸಲು ನಿರ್ಧರಿಸಿ, ತನ್ನ ತಲೆಯ ಮೇಲಿನ ಹ್ಯಾಟನ್ನು ತೆಗೆದು, ಗಾಂಧಿ ಟೊಪ್ಪಿಗೆಯನ್ನು ಧರಿಸಿ, ಪೊಲೀಸರ ಕಟ್ಟೆಚ್ಚರದಲ್ಲಿ ಕೊಂಡೊಯ್ಯುತ್ತಿದ್ದ ಚಿತಾಭಸ್ಮಕ್ಕೆ ತಲೆಬಾಗಿ ನಮಸ್ಕರಿಸಿದ. ಚಿತಾಭಸ್ಮವಿದ್ದ ಕರಂಡಕವನ್ನೊಳಗೊಂಡ ಬೋಗಿಗೆ ಕೆಲವೇ ಅತಿಮುಖ್ಯ ಗಣ್ಯರ ಹೊರತು ಬೇರೆಯವರಿಗೆ ಪ್ರವೇಶವಿಲ್ಲದಿರುವಾಗ ಸರ್ಕಾರಿ ನೌಕರನೊಬ್ಬ ಗಾಂಧಿ ಟೊಪ್ಪಿಯನ್ನು ಧರಿಸಿ ಹೋಗುವುದೆಂದರೆ? ಅದೊಂದು ಅಪರಾಧವೆಂದೇ ಪರಿಗಣಿಸಿದ ಪೊಲೀಸು ಅಧಿಕಾರಿಗಳು ಮುಖ್ಯಮಂತ್ರಿ ರವಿಶಂಕರ್ ಶುಕ್ಲಾರಿಗೆ ದೂರು ನೀಡಿದರು. ಗಾಂಧೀಜಿಯವರಿಗೆ ಗೌರವ ಸೂಚಿಸುವುದು ಕಾನೂನಿನ ಉಲ್ಲಂಘನೆಯಲ್ಲ. ಅಲ್ಲದೆ ಅವನ ಮೇಲೆ ಕ್ರಮಕೈಗೊಳ್ಳುವ ಅಧಿಕಾರವಿರುವುದು ರೇಲ್ವೆ ಇಲಾಖೆಗೆ ಮಾತ್ರ ಎಂದು ಮುಖ್ಯಮಂತ್ರಿಗಳು ಪೊಲೀಸರನ್ನು ಹೊರಗಟ್ಟಿದರು. ಆಗ ಇಲಾಖಾ ತನಿಖೆಗೆ ಆದೇಶಿಸಲಾಯಿತು. ಮಂಡಲ ಅಧೀಕ್ಷಕರ ಕಚೇರಿಗೆ ಬಂದ ಖೇರ್ಕರವರಿಂದ ವಿಚಾರಣೆ ಪ್ರಾರಂಭವಾಯಿತು. ಮಹಾತ್ಮಾಜಿಯ ಚಿತಾಭಸ್ಮಕ್ಕೆ ಗೌರವ ಸೂಚಿಸಲು ಅನುಸರಿಸಿದ ಕ್ರಮ ರೈಲ್ವೆ ಕಾನೂನಿನ ಚೌಕಟ್ಟನ್ನು ಮೀರಿದ್ದು ಎಂದು ಅಪಾದಿಸಲಾಯಿತು. ಕೊನೆಗೆ ಸೆಂಟ್ರಲ್ ರೈಲ್ವೆ ಜನರಲ್ ಮ್ಯಾನೇಜರ್ ಅವರ ನಿರೂಪವನ್ನು ತಿಳಿಸಲಾಯಿತು. ಅದರಲ್ಲಿ ಜನರಲ್ ಮ್ಯಾನೇಜರ್ ಅವರು ಕಾನೂನಿನ ರೀತಿ ಹರಿಭಾವೂ ಮಾಡಿದ್ದು ತಪ್ಪಾಗಿದೆಯಾದರೂ, ರೈಲ್ವೆ ನೌಕರನಾಗಿ ಮಹಾತ್ಮಾಜಿಯವರ ಚಿತಾಭಸ್ಮಕ್ಕೆ ಗೌರವ ಸೂಚಿಸಿರುವುದು ಸ್ತುತ್ಯವೇ ಎಂದು ಶ್ಲಾಘಿಸಿ ಬರೆಯಲಾಗಿತ್ತು. ಅದನ್ನು ಕೇಳಿ ಹರಿಭಾವೂ ಕಣ್ಣಿಂದ ಆನಂದಾಶ್ರುಗಳು ಸುರಿದವು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!