ಬಸವನ ಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರೇಮ ವೈಫಲ್ಯ ಹೊಂದಿದ ಕೆಲವರು ಕರೆಂಟ್ ಹೊಡೆದ ಕಾಗೆ ತರಹ ಆಗ್ತಾರಲ್ಲ?
ಕರೆಂಟ್ ಹೊಡೆದ ಕಾಗೆ, ಹುಡುಗಿ ಮುಟ್ಟಿದ ಹುಡುಗ ಎರಡೂ ಒಂದೇ ಅಂತಾಯ್ತು.
ವಿ. ಹೇಮಂತಕುಮಾರ, ಬೆಂಗಳೂರು, 9901739104
ನಗುವುದು ಅಳುವುದು ಯಾವ ಭಾಷೆ?
ಇದು ವಿಶ್ವಭಾಷೆ.
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 988079110
ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ ಎಂದವರು ಈಗ ಉಲ್ಟಾ ಹೊಡೆಯುತ್ತಿದ್ದಾರಲ್ಲಾ?
ಅವರ ಮಾತಿಗೆ ಅವರೇ ಎಷ್ಟು ಬೆಲೆ ಕೊಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.
ಜಗದೀಶ ಎಸ್. ಬೆಳಗಾವಿ, 8722444410
ಹಳೇ ಪ್ರೀತಿ ಮತ್ತು ಹೊಸ ಪ್ರೀತಿ ಯಾವುದು ಒಳ್ಳೆಯದು?
ಎರಡೂ ಇದ್ದರೆ ಇನ್ನೂ ಒಳ್ಳೆಯದು!
ಬಾಣಭಟ್ಟ