'ಮುತ್ತು' ಇದು ಯಾವತ್ತೂ ದುಬಾರಿ, ಆದರೂ ಮತ್ತೂ ಬೇಕೆನಿಸುತ್ತದೆ
ಈರುಳ್ಳಿ ದುಬಾರಿಯಾದಾಗಿನಿಂದ ಬರೀ ಕಣ್ಣೀರನ್ನಷ್ಟೇ ಅಲ್ಲ, ರಕ್ತ ಕಣ್ಣೀರನ್ನೇ ತರಿಸುತ್ತಿದೆ
'ಅನ್ಯತ್ರ ಅಲಭ್ಯ' ಎಂಬ ಸ್ಥಿತಿಯಲ್ಲಿ ಉಂಟಾಗುವಂಥದ್ದು
ಸಜ್ಜೆ ದುಬಾರಿಯಾದರೂ ನಡೆದೀತು, ಸಜ್ಜನಿಕೆ ದುಬಾರಿಯಾಗಬಾರದು
ದೋ ಬಾರ್ ಅಥವಾ ಬಾರ್ ಬಾರ್ ಆಲೋಚಿಸಿ ಕೊಳ್ಳುವಂತೆ ಮಾಡುವಂಥದ್ದು
ಇದು ಎಲ್ಲ ಕಾಲಘಟ್ಟದಲ್ಲೂ ಜನರ ಬಾಯಲ್ಲಿ ನಲಿಯುತ್ತಿದ್ದ ಶಬ್ದವೇ
ದುಬಾರಿ ಎಂಬುದು ಮಾತ್ರ ಬಹಳ ಸಸ್ತ. ಎಲ್ಲ ಕಡೆಯೂ ಕಾಣಸಿಗುತ್ತದೆ
ಬೆಲೆ ಏರಿ ಭಲೇ ಎನಿಸಿಕೊಳ್ಳುವುದೇ ಇದರ ಲಕ್ಷಣ
ವಸ್ತುಗಳಿಗೆ ಒದಗುವ 'ತುರ್ತು' ಪರಿಸ್ಥಿತಿ.
ತೆತ್ತಷ್ಟೂ ಸಾಲದು ಎನಿಸುವಷ್ಟು ತುಟ್ಟಿ ಇದು
ಇದ್ಯಾಕೋ ಸ್ವಲ್ಪ ಜಾಸ್ತಿಯಾಯ್ತು ಎಂದು ಕೈ ಕುಡುಗುವಂತೆ ಮಾಡುವಂಥದ್ದು
ವಿಶ್ವನಾಥ ಸುಂಕಸಾಳ