ರಾಮ್, 9986746942
ಲವ್ ಅಟ್ ಫಸ್ಟ್ ಸೈಟ್ ಅಂದರೆ ಲವ್ ಮಾಡೋದಾದ್ರೆ ಮೊದಲು ಸೈಟ್ ಮಾರಿ ಅಂತಾನಾ?
ಲವ್ ಮಾಡೋ ಮೊದಲು ಸೈಟ್ ಮಾಡಿ ಅಂತ. ಆಮೇಲೆ ಮಾಡೋಕಾಗಲ್ಲ.
ಮ.ಶಿವಸ್ವಾಮಿ ಕರೋಹಟ್ಟಿಕಲ್, ಬೆಂಗಳೂರು, 8105805103
ಪ್ರೀತ್ಸೊ ಗಂಡನ ಬೇಡವೆಂದ ಪ್ರೇಯಸಿ ಅವನ ಆಸ್ತಿಯನ್ನು ಕೇಳೋದು ತಪ್ಪಲ್ವಾ?
ಹಣ, ಆಸ್ತಿಗೆ ಮೈಲಿಗೆಯಿಲ್ಲ!
ಎ.ಎಚ್. ಪ್ರಕಾಶಕುಮಾರ, ಶಿಕಾರಿಪುರ, 9886016328
ಕದ್ದುತಿಂದ ಹಣ್ಣು ರುಚಿ ಜಾಸ್ತಿ ಅಂತಾರಲ್ಲ ಯಾಕೆ?
ರುಚಿಯ ಜತೆ ಥ್ರಿಲ್ ಸೇರಿರುವುದರಿಂದ.
ಆರ್.ಸಿ. ಪರಶುರಾಮ,ಶಿಕಾರಿಪುರ
ಕೇಳ್ರಪ್ಪೋ ಕೇಳಿ ವಿಭಾಗ ಉಪ್ಪರಿಗೆಯಿಂದ ನೆಲಮಾಳಿಗೆಗೆ ಬದಲಾಗಲು ಕಾರಣ?
ಎಲ್ಲಿ ಕೇಳಿದರೂ ಒಂದೇ ಬಿಡಿ!
ಬಾಣಭಟ್ಟ