ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಿನಿಮಾದಲ್ಲಿ ನಾಯಕನಿಗಿಂತಾ ಖಳನಟ ಸುಂದರವಾಗಿದ್ದರೂ...

Vishwanath S
Updated On : 6 Mar 2014, 12:07 pm

ಫ್ಯಾಷನ್ ಡಿಸೈನರ್ ಮಧು, 9945737427
ಸಿನಿಮಾದಲ್ಲಿ ನಾಯಕನಿಗಿಂತಾ ಖಳನಟ ಸುಂದರವಾಗಿದ್ದರೂ ನಾಯಕಿ ನಾಯಕನನ್ನೇ ಬಿಗಿದಪ್ಪಿ ಮುದ್ದಾಡುವುದೇಕೆ?
ಆಕೆಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ. ನಿರ್ದೇಶಕ ಹೇಳಿದಂತೆ ಕೇಳುವ ಅನಿವಾರ್ಯ.

ವಾದಿರಾಜ ಜಿ. ರಾಯ್ಕರ್, ಬೆಂಗಳೂರು
ಕೆರಳಿದ ಸಿಂಹ ಸಾಹಸಸಿಂಹ, ಸಿ.ಆರ್. ಸಿಂಹ ಹೀಗೆ ಸಿಂಹಗಳೇ ನಮ್ಮನ್ನು ಅಗಲಿ ಹೋಗ್ಯಾ ಇವೆಯಲ್ಲ?
ಸಿಂಹಗಳ ಸಂತತಿ ಕಡಿಮೆಯಾಗುತ್ತಿರುವ ಮುನ್ಸೂಚನೆ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಸುಳ್ಳಿನಿಂದ ಶುರುವಾಗೋ ಪ್ರೀತಿ ಎಷ್ಟು ದಿನ ಉಳಿಯುತ್ತದೆ?
ಸತ್ಯ ಗೊತ್ತಾಗೋತನಕ!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಮೋಡದ ಮರೆಯಲ್ಲಿರುವ ಚಂದಿರನಿಗೂ ಸೆರಗಿನ ಮರೆಯಲ್ಲಿರುವ ಚೆಲುವೆಗೂ ವ್ಯತ್ಯಾಸವೇನು?
ಇಬ್ಬರೂ ಇದ್ದೂ ಪ್ರಯೋಜನವಿಲ್ಲ.

ನಂದ ಯಡಿಯೂರು, 9880055196
ಅಂದು ಹುಡುಗಿಯರ ಮನಗೆಲ್ಲಲು ರಕ್ತದಲ್ಲಿ ಪ್ರೇಮಪತ್ರ ಬರೀತಾ ಇದ್ರು ಆದರೆ ಇಂದು?
ಸೋನಿಯಾ ಮನಗೆಲ್ಲಲು ರಾಹುಲ್‌ನನ್ನು ಹೊಗಳುತ್ತಾರೆ!


-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement