ಅಳಿಯನ ಮೇಲಿನ ಆರೋಪಕ್ಕೆ ಮಾವ ರಾಜಿನಾಮೆ ನೀಡುತ್ತಾನೆ. ಅತ್ತೆ?
ಚಿರಪ್ರಭ, ನಂಜನಗೂಡು, 8553793107
ಅಳಿಯನ ಮೇಲಿನ ಆರೋಪಕ್ಕೆ ಮಾವ ರಾಜಿನಾಮೆ ನೀಡುತ್ತಾನೆ. ಅತ್ತೆ?
ಆಕೆ ಯಾವತ್ತೂ ಸುಖವಾಗೇ ಇರುತ್ತಾಳೆ.
ನೇರಲಗುಡ್ಡ ಶಿವಕುಮಾರ, 9480343742
ಡಾಲರ್ಸ್ ಕಾಲನಿಗೂ, ಬೆಗ್ಗರ್ಸ್ ಕಾಲನಿಗೂ ಇರುವ ಭಿನ್ನತೆ ಏನು?
ಡಾಲರ್ಸ್ ಕಾಲನಿಯಲ್ಲಿ ಬೆಗ್ಗರ್ಸ್ ಇದ್ದಾರೆ ಆದರೆ ಬೆಗ್ಗರ್ಸ್ ಕಾಲನಿಯಲ್ಲಿ ಡಾಲರ್ಗಳಿಲ್ಲ.
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಹಟ ಮಾಡೋ ಹುಡುಗಿಯನ್ನು ಪ್ರೀತಿಸೋದು ಕಷ್ಟವಂತೆ?
ಚಟ ಮಾಡೋ ಹುಡುಗನನ್ನು ಪ್ರೀತಿಸಿದಷ್ಟೇ ಕಷ್ಟ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಸರ್ದಾರ್ಜಿ ಜೋಕ್ಸಿಗೂ ಕೇಜ್ರಿವಾಲರ ಜೋಕ್ಸಿಗೂ ಏನು ವ್ಯತ್ಯಾಸ?
ಪೇಟದ ಬದಲು ಟೋಪಿ ಇರುತ್ತದೆ!
ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9008741348
ಕೋಗಿಲೆ ಕಂಠದ ಹುಡುಗಿಯ ಹಾಡಿಗೆ ನನ್ನ ಮೈ ಮನ ರೋಮಾಂಚನಗೊಳ್ಳುವುದೇಕೆ?
ರೋಮಾಚಂನಗೊಂಡಿದ್ದು ಕಂಠದಿಂದಲೋ ಸೊಂಟದಿಂದಲೋ ಎಂಬುದು ಅನುಮಾನ
-ಬಾಣಭಟ್ಟ