ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಠಗಳಿಗೆ ಸರ್ಕಾರದ ಹಣ

Vishwanath S
Updated On : 8 Mar 2014, 12:06 pm

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ ಬಜೆಟ್ ಭಾಷಣದ ಒಂದು ದೊಡ್ಡ ಭಾಗ ಮಠಮಾನ್ಯಗಳಿಗೆ ಸರ್ಕಾರದ ಕೊಡುಗೆ ಕುರಿತ ಪ್ರಸ್ತಾಪಕ್ಕೇ ಮೀಸಲಾಗಿರುತ್ತಿತ್ತು. ಆ ಸಂಪ್ರದಾಯವನ್ನು ಜಗದೀಶ ಶೆಟ್ಟರ್ ಅವರೂ ಮುಂದುವರಿಸಿದರು.
ಈ ವಿಚಾರದಲ್ಲಿ ರಾಜ್ಯದಲ್ಲಿ ಸಾಕು - ಬೇಕಾದಷ್ಟು ಚರ್ಚೆ ನಡೆದಿದೆ. ಅದಕ್ಕೆ ಯಡಿಯೂರಪ್ಪ ಅವರ ಉತ್ತರ ಎಂದರೆ, ಸರ್ಕಾರ ಮಾಡಬೇಕಾದ ಕೆಲಸವನ್ನು ಮಠಗಳು ಮಾಡುತ್ತಿರುವುದರಿಂದ ಆ ಸಂಸ್ಥೆಗಳಿಗೆ ಸರ್ಕಾರದ ಹಣ ಕೊಡುವುದು ನ್ಯಾಯವಾಗಿಯೇ ಇದೆ ಎನ್ನುವುದು. ನಿಜ. ಸಾರ್ವಜನಿಕ ಉದ್ದೇಶಕ್ಕಾಗಿ, ಹಲವಾರು ಸಂಸ್ಥೆಗಳಿಗೆ ಸರ್ಕಾರ ಅನುದಾನ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಯಡಿಯೂರಪ್ಪ ಅವರ ಕಾಲದಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಯಾವ ಷರತ್ತುಗಳೂ ಇಲ್ಲದೆ ನೆರವು ನೀಡಿದ್ದು ಸರಿಯಲ್ಲ ಎನ್ನುವ ವಾದಕ್ಕೆ ಜನರ ಪುರಸ್ಕಾರ ಸಿಕ್ಕಿತ್ತು.
 ಸಿದ್ದರಾಮಯ್ಯ ಅವರ ಮೊದಲ ಬಜೆಟ್‌ನಲ್ಲಿ ಅಗತ್ಯ ಕಂಡು ಬಂದರೆ, ಧಾರ್ಮಿಕ ಸಂಸ್ಥೆಗಳಿಗೆ ನೆರವನ್ನು ಕೊಡಲಾಗುವುದೆಂದು ಹೇಳಿದ್ದರೂ, ವಿವರಗಳನ್ನು ಪ್ರಕಟಿಸಿರಲಿಲ್ಲ. ಈಗ ರಾಜ್ಯ ಸರ್ಕಾರ 170 ಮಠಗಳಿಗೆ ಸುಮಾರು 66 ಕೋಟಿ ರುಪಾಯಿಗಳ ನೆರವನ್ನು ಮಂಜೂರು ಮಾಡಿದೆ. ಆದರೆ ಈ ಮಂಜೂರು ಆದೇಶದಲ್ಲಿ ಧಾರ್ಮಿಕ ಸಂಸ್ಥೆಗಳು ತಮ್ಮ ಜನಾಂಗಗಳಿಗೆ ಅನುಕೂಲವಾಗುವಂತಹ ಸಮುದಾಯ ಭವನಗಳ ಹಾಗೂ ವಿದ್ಯಾರ್ಥಿಗಳ ವಸತಿ ಗೃಹಗಳನ್ನು ನಿರ್ಮಿಸಲು ಈ ಹಣವನ್ನು ವಿನಿಯೋಗಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದೇಶದಲ್ಲಿ ನಮೂದಾಗಿರುವ ಎರಡು ಉದ್ದೇಶಗಳೂ "ಸಾರ್ವಜನಿಕ" ಎನ್ನುವ ಪದದ ವ್ಯಾಪ್ತಿಯಲ್ಲೇ ಬರುವುದರಿಂದ ಈ ಕೊಡುಗೆಗೆ ಆಕ್ಷೇಪವಿರಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement