ದುಡಿದು ತಿನ್ನುವವರಿಗೂ ಹೊಡ್ಕೊಂಡು ತಿನ್ನುವವರಿಗೂ ಏನು ವ್ಯತ್ಯಾಸ?
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ದುಡಿದು ತಿನ್ನುವವರಿಗೂ ಹೊಡ್ಕೊಂಡು ತಿನ್ನುವವರಿಗೂ ಏನು ವ್ಯತ್ಯಾಸ?
ಮದುವೆಯಾಗಿ ಹನಿಮೂನ್‌ಗೆ ಹೋಗುವವನಿಗೂ, ಎತ್ತಾಕ್ಕೊಂಡೋಗಿ ಅತ್ಯಾಚಾರ ಮಾಡೋನಿಗೂ ಇರುವಷ್ಟೇ ವ್ಯತ್ಯಾಸ.
ರವಿಕುಮಾರ ಜಿ.ಬಿ. ಶೇಷಾದ್ರಿಪುರಂ, ಬೆಂಗಳೂರು
ದತ್ತುಪುತ್ರ ರಾಮುಲು ಬಿಜೆಪಿ ಸೇರಲು ತಾಯಿ ಸುಷ್ಮಾ ಸ್ವರಾಜ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ?
ತಾಯಿಯ ಮಮತೆಯೇ ಮಕ್ಕಳು ಹಾಳಾಗಲು ಎಂಬ ಆರೋಪ ಕಾರಣವಿರಬೇಕು!
ಬರ್ಕಲಿರಮೇಶ ಕಿರಗಂದೂರು, ಮಂಡ್ಯ, 9008741348
ನನ್ನವಳಿಲ್ಲದ ಈ ಬದುಕು ದೊಂಬರಾಟವೆನಿಸುತ್ತದೆಯಲ್ಲಾ?
ಇದ್ದಿದ್ದರೆ ಸರ್ಕಸ್ ಆಗುತ್ತಿತ್ತು!
ಓಂಚನ್ನೇಶ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಗಂಡು-ಹೆಣ್ಣು ಪರಸ್ಪರ ಕೈ-ಕೈ ಹಿಡಿದರೆ ಸತಿಪತಿ. ಅದೇ ಕೈ ಕೊಟ್ಟರೆ?
ದೇವರೇ ಗತಿ!
ಎಂ.ಎಸ್. ಮಂಜುನಾಥ ಅಣಜಿ, ಹೊನ್ನಾಳಿ
ಬೇರೆ ಬೇರೆ ವೃತ್ತಿ ಮಾಡುವವರೆಲ್ಲಾ ಸಾಕಪ್ಪಾ ನೀ ಮಾತ್ರ ಈ ಕೆಲಸಕ್ಕೆ ಬರಬೇಡ ಅಂತ ತಮ್ಮ ಮಕ್ಕಳಿಗೆ ಹೇಳಿದರೆ, ರಾಜಕಾರಣಿಗಳು ಮಾತ್ರ ಹಾಗೆ ಹೇಳಲ್ವಲ್ಲ?
ರಾಜಕೀಯ ವೃತ್ತಿಯಲ್ಲ, ಪ್ರವೃತ್ತಿ!
-ಬಾಣಭಟ್ಟ