ಹೇಳಿದಂತೆ ಕೇಳುವ ಪತಿ; ತಯಾರಿಸುವ ವಿಧಾನ..
ಹೇಳಿದಂತೆ ಕೇಳುವ ಪತಿ; ತಯಾರಿಸುವ ವಿಧಾನ..
ಬೇಕಾಗುವ ಸಾಮಗ್ರಿ: ಕರ್ಕಶ ಧ್ವನಿ, ಕಟು ಪದಗಳು, ರುಚಿಗೆ ತಕ್ಕಷ್ಟು ರೇಗಾಟ!
ಮಲಗಿರುವ ಪತಿಯ ಮೇಲೆ ಬಾಣಲೆಯಿಂದ ತಣ್ಣೀರು ಚೆಲ್ಲಿ ಅವರನ್ನು ಚೆನ್ನಾಗಿ ಬೈಯ್ಯುತ್ತಾ ತೊಳೆಯಿರಿ. ನಂತರ ಅವರಿಗೆ ಒತ್ತಾಯಪೂರ್ವಕವಾಗಿ ಬಣ್ಣ, ರುಚಿ ಮತ್ತು ಶಕ್ತಿಯಿಲ್ಲದ ಚಹ ಕುಡಿಸಿ. ಜೊತೆ ಜೊತೆಗೇ ವ್ಯಂಗ್ಯಾತ್ಮಕ ಪದಗಳ ಮಸಾಲೆಯನ್ನು ಅಷ್ಟಿಷ್ಟು ಎರಚಿ ಕರ್ಕಶ ಪದಗಳ ಕುಕ್ಕರಿನಲ್ಲಿ ಕುದಿಸುತ್ತಿರಿ. ಪತಿದೇವ ಪ್ರೆಷರ್ ತಾಳಿಕೊಳ್ಳದೆ ಕೆಂಪಗಾದರೆ, ತವರುಮನೆಗೆ ಹೊರಟುಹೋಗುತ್ತೇನೆ ಎಂದು ಕಣ್ಣೀರು ಹಾಕಿ ತಣ್ಣಗೆ ಮಾಡಿ. ಈಗ ಹೇಳಿದಂತೆ ಕೇಳುವ ಪತಿ ರೆಡಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.