ಕಾಯಿಸುವ ಹುಡುಗಿಯರನ್ನು ಯಾರೂ ಪ್ರೀತಿಸಬಾರದಂತೆ ಯಾಕೆ?
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಕಾಯಿಸುವ ಹುಡುಗಿಯರನ್ನು ಯಾರೂ ಪ್ರೀತಿಸಬಾರದಂತೆ ಯಾಕೆ?
ಹಾಗೆ ಮಾಡಿದ್ದರೆ ಬಹುತೇಕರು ಬ್ರಹ್ಮಚಾರಿಗಳಾಗೇ ಇರಬೇಕಾಗುತ್ತಿತ್ತು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಕೆಸರಿನಲ್ಲಿ ಹುಟ್ಟಿರುವ ಕಮಲಕ್ಕೂ ಕೆಸರಾಗಿರುವ
ಕೈಗೂ ವ್ಯತ್ಯಾಸವೇನು?
ಬಾಯಿ ಮೊಸರಾಗುತ್ತೆ ಅಂತ ಕೈ ಕೆಸರು ಮಾಡ್ಕೊಂಡಿದ್ದು ಅಂದ್ರಂತೆ ಕಾಂಗ್ರೆಸ್ಸಿಗರು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಎಲ್ಲ ದೇವರನ್ನು ಪ್ರೀತಿಸಿದ ಹಾಗೆ ಬ್ರಹ್ಮ ದೇವರನ್ನೇಕೆ ಪೂಜಿಸುವುದಿಲ್ಲ?
ಅದು ಬಹ್ಮನ ಹಣೆಬರಹ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಬಾಡದಿರುವ ಹೂ ಮುಡಿಯಬೇಕು ಅಂತ ಆಸೆಪಟ್ಟಿದ್ದಾಳಲ್ಲಾ?
ಅದು ಮುದುಕಿಯಾಗದೇ ಇರುವವರಿಗಾಗಿ ಮಾತ್ರ ಅಂತ ಹೇಳು!
ಶ್ರೀಧರ ಡಿ. ರಾಮಚಂದ್ರ, ತುರವನೂರು,
ಚಿತ್ರದುರ್ಗ
ದಾನಗಳಲ್ಲೇ ಶ್ರೇಷ್ಟವಾದ ದಾನ ಯಾವುದು?
ಸಾಕಷ್ಟಿದೆ, ಆದ್ರೆ ಪಡ್ಡೆಗಳ ಪ್ರಕಾರ ಮೈದಾನ!
-ಬಾಣಭಟ್ಟ