ಜಯಲಲಿತಾ ಪಿಚಕಾರಿ: ಇದನ್ನು ಖರೀದಿಸಿದರೆ ಅಕ್ಕಿ, ಸೀರೆ, ಟಿ.ವಿ. ಇತ್ಯಾದಿಗಳು...
(ರಾಜಕೀಯ ಹೋಲಿಯಲ್ಲಿ ಕೆಲವು ಪಿಚಕಾರಿಗಳು)
ಜಯಲಲಿತಾ ಪಿಚಕಾರಿ: ಇದನ್ನು ಖರೀದಿಸಿದರೆ ಅಕ್ಕಿ, ಸೀರೆ, ಟಿ.ವಿ. ಇತ್ಯಾದಿಗಳು ಉಚಿತವಾಗಿ ದೊರೆಯುತ್ತವೆ. ಆದರೆ ಇದಕ್ಕೆ ನೀರನ್ನು ಮಾತ್ರ ಕರ್ನಾಟಕದಿಂದ ಬಳಸಬೇಕು.
ರಾಜ್ಠಾಕ್ರೆ ಪಿಚಕಾರಿ: ಈ ಪಿಚಕಾರಿ ಕೇವಲ ಮುಂಬೈಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಕೇವಲ ಉತ್ತರ ಭಾರತೀಯರ(ಅದರಲ್ಲೂ ಮುಖ್ಯವಾಗಿ ಬಿಹಾರಿಗಳ) ಮೇಲಷ್ಟೇ ಬಣ್ಣ ಚೆಲ್ಲಲು ಉಪಯೋಗಿಸಬಹುದು.
ಮನಮೋಹನ್ ಪಿಚಕಾರಿ: ಈ ಪಿಚಕಾರಿ ಶಬ್ದ ಹೊರಡಿಸುವುದಿಲ್ಲ. ಇದರ ಗುಣಮಟ್ಟವನ್ನು 'ಇತಿಹಾಸವೇ ನಿರ್ಧರಿಸಲಿದೆ' ಎಂದು ಹೇಳಲಾಗುತ್ತದೆ.
ಕೇಜ್ರೀವಾಲ್ ಪಿಚಕಾರಿ: ವಿಐಪಿಗಳಿಗೆ ಈ ಪಿಚಕಾರಿ ಲಭ್ಯವಿಲ್ಲ. ಹೆಚ್ಚೆಂದರೆ 49 ದಿನಗಳಷ್ಟೇ ಉಪಯೋಗಿಸಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.