ಜೀವನ ಅನ್ನೋದು ಅವಕಾಶಗಳಿಂದ ತುಂಬಿದ ಹರಿವ ನದಿಯಂತೆ?
ನೆಲಮಂಗಲ ಮಹೇಶ್,
ಜೀವನ ಅನ್ನೋದು ಅವಕಾಶಗಳಿಂದ ತುಂಬಿದ ಹರಿವ ನದಿಯಂತೆ?
ಅದಕ್ಕೇ ಕೆಲವರು ಮುಳುಗಿಹೋದೆ ಅನ್ನುತ್ತಾರೆ!
ಸ್ವಾಮಿ ಎಂ.ಸಿ.ಎಲ್. ಚನ್ನಗಿರಿ, ದಾವಣಗೆರೆ
ಅಪ್‌ಡೇಟ್ ಆಗ್ಲಿಕ್ಕೆ ನೆಟ್‌ಪ್ಯಾಕ್ ಬೇಕು ಅಂತಾರೆ. ಅಪ್‌ಡೇಟ್ ಅಂದ್ರೇನು?
ನೀನು ಅಪೂಟ್ ಅಪ್‌ಡೇಟ್ ಆಗಿಲ್ಲ ಅಂತಾಯ್ತು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
'ಹೆಂಡ'ತಿ ಪದದಲ್ಲೇ ಹೆಂಡವಿದ್ದರೂ ಅವರೇಕೆ ಹೆಂಡವನ್ನು ವಿರೋಧಿಸುತ್ತಾರೆ?
ಬೇರೆ 'ಹೆಂಡ'(ತಿ)ಯತ್ತ ಗಮನ ಹರಿಸುವುದು ಅವರಿಗೆ ಇಷ್ಟವಾಗುವುದಿಲ್ಲ!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಮೈಮೇಲೆ ದೇವರು ಬಂದವರು (ಬರಿಸಿಕೊಂಡವರು) ಏಕೆ ಕಣ್ಣನ್ನು ಮುಚ್ಚಿಕೊಳ್ಳುತ್ತಾರೆ?
ಕಣ್ಣುಮುಚ್ಚಿಕೊಂಡಿದ್ದರೂ ದೇವರಿಗೆ ಕಾಣುತ್ತದೆ ಎಂಬ ನಂಬಿಕೆಯಿಂದ!
ಜಗದೀಶ ಎಸ್. ಬೆಳಗಾವಿ, 8722444410
ಸಪ್ತಪದಿ ತುಳಿಯದೇ ಮದುವೆಯಾದರೆ ಏನಾಗುತ್ತದೆ?
ಹೇಗೆ ಮದುವೆಯಾದರೂ ಪರಿಣಾಮ ಒಂದೇ!
ಬಾಣಭಟ್ಟ