ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಐಪಿಎಸ್ ಮೇಲೇಕೆ ಕೋಪ?

Mainashree
Updated On : 19 Mar 2014, 9:29 am

ಸುಪ್ರೀಮ್ ಕೋರ್ಟ್, ಒಂದು ಪ್ರಕರಣದಲ್ಲಿ ನೀಡಿದ ಆದೇಶದಂತೆ, ಐ.ಎ.ಎಸ್, ಐ.ಎಫ್.ಎಸ್ (ಅರಣ್ಯ) ಹಾಗೂ ಐ.ಪಿ.ಎಸ್. ಅಧಿಕಾರಿಗಳನ್ನು ಒಂದು ಹುದ್ದೆಗೆ ನೇಮಿಸಿದ ಅನಂತರ ಅವರಿಗೆ ಕನಿಷ್ಠಪಕ್ಷ ಎರಡು ವರ್ಷಗಳ "ಸೇವೆಯ ಅಧಿಕಾರವನ್ನು" ನೀಡಬೇಕು.
ಸರ್ಕಾರಗಳು ಹಿರಿಯ ಅಧಿಕಾರಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ, ನೀತಿ- ನಿಯಮಗಳೇ ಇಲ್ಲದೇ ವರ್ಗ ಮಾಡುವುದನ್ನು ತಪ್ಪಿಸಲು ನೀಡಿದ ಆದೇಶ ಇದು. ಅದನ್ನು ಒಪ್ಪಿಕೊಂಡು, ಕೇಂದ್ರ ಸರ್ಕಾರ ಈಗಾಗಲೇ ಈ ವಿಚಾರದಲ್ಲಿ ಅಧಿಕೃತವಾಗಿ ಪ್ರಕಟಣೆಯನ್ನೂ ಹೊರಡಿಸಿ, ಕಾರ್ಯಾಚರಣೆಗೂ ತಂದಿದೆ.
ಆದರೆ ಕರ್ನಾಟಕ ರಾಜ್ಯ ಸರ್ಕಾರ ಇದೇ ವಿಷಯದಲ್ಲಿ ಜನವರಿಯಲ್ಲಿ ಪ್ರಕಟಿಸಿದ ಅಧಿಸೂಚನೆಯಲ್ಲಿ ಐ.ಎ.ಎಸ್.- ಐ.ಎಫ್.ಎಸ್. ದರ್ಜೆಯ ಅಧಿಕಾರಿಗಳಿಗೆ ಮಾತ್ರ ಆ ನಿಯಮವನ್ನು ಜಾರಿಗೆ ತಂದು, ಐ.ಪಿ.ಎಸ್. ಅಧಿಕಾರಿಗಳನ್ನು ಆ ನಿಯಮದ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಪಕ್ಷಪಾತದ ಆದೇಶವನ್ನು ಕುರಿತು ಹೈಕೋರ್ಟಿಗೆ ಕೆಲವರು ಅರ್ಜಿಗಳನ್ನು ಸಲ್ಲಿಸಿದಾಗ, ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸು ನೀಡಿದ್ದೂ ಆಗಿದೆ. ಅದು ಕಾಯಿದೆಗೆ ಸಂಬಂಧಿಸಿದ ವಿಚಾರ.
ಆದರೆ ಇದರಲ್ಲಿ ಜನರಿಗೂ ಆಸಕ್ತಿ ಇರುವುದರಿಂದ, ಸರ್ಕಾರ ತನ್ನ ಪಾರದರ್ಶಕತೆಯನ್ನು ಪ್ರದರ್ಶಿಸಲು ಈ ವಿಚಾರದಲ್ಲಿ ತನ್ನ ಚಿಂತನೆಯನ್ನು ಪ್ರಕಟಿಸುವುದು ಸೂಕ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement