ಚುನಾವಣೆಯಲ್ಲಿ ಅಭ್ಯರ್ಥಿ ಆರಿಸುವುದಕ್ಕೂ ಮದುವೆಗೆ ಹೆಣ್ಣು- ಗಂಡನ್ನು...
ವಿ. ಹೇಮಂತಕುಮಾರ, ಬೆಂಗಳೂರು, 9035992900
ಚುನಾವಣೆಯಲ್ಲಿ ಅಭ್ಯರ್ಥಿ ಆರಿಸುವುದಕ್ಕೂ ಮದುವೆಗೆ ಹೆಣ್ಣು- ಗಂಡನ್ನು ಆರಿಸುವುದಕ್ಕೂ ವ್ಯತ್ಯಾಸವೇನು?
ಮುಂದಿನ ಚುನಾವಣೆ ಹೊತ್ತಿಗೆ ಪಕ್ಷಾಂತರದ ಅವಕಾಶವಿದೆ. ಮದುವೆಯಲ್ಲಿ ಅಂತಹ ಅವಕಾಶವಿಲ್ಲ!
ಶ್ರೀಧರ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ
ಪ್ರೇಮ ನಿವೇದನೆಗೆ ಗುಲಾಬಿ ಬದಲು ದಾಸ್ವಾಳ ಕೊಟ್ರೆ?
ಕಂಜೂಸ್ ನನ್ಮಗ ಅಂದ್ಕೊಂಡು ಕೆಲಸದವಳ ನಂಬರ್ ಕೊಟ್ಟಾಳು ಹುಶಾರ್!
ರವಿಕುಮಾರ ಜಿ.ಬಿ. 9449669897
ರಾಜಕಾರಣಿಗಳಿಗೂ ಭಿಕ್ಷೆ ಬೇಡುವವರಿಗೂ ಏನು ವ್ಯತ್ಯಾಸ?
ಒಬ್ಬರಿಗೆ ಓಟು, ಇನ್ನೊಬ್ಬರಿಗೆ ನೋಟು.
ರವಿಕುಮಾರ ಜಿ.ಬಿ. 9449669897
ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ತೋರಿಸುವ ಪ್ರೀತಿ ನಂತರ ತೋರುವುದಿಲ್ಲವಲ್ಲ?
ಮದುವೆಗೆ ಮೊದಲು ತೋರಿದ ಪ್ರೀತಿಯನ್ನೇ ನಂತರವೂ ತೋರುವುದು ಕಷ್ಟ!
ಲಕ್ಷ್ಮೀ ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9538786547
ಇಲ್ಲೊಬ್ಬ ಕುಡಿದಾಗ ತನ್ ಹೆಂಡ್ತಿ ತ್ರಿಪುರ ಸುಂದರಿಯೆಂದು ಹೊಗಳುವುದರ ಹಿಂದಿನ ಮರ್ಮವೇನು?
ವರ್ಣನೆ ಮೂಲಕ ಬೇರೆಯವರ ಹೆಂಡ್ತಿ
ಹೇಗಿದ್ದಾಳೆ ಎಂದು ತಿಳಿಯುವ ಚಪಲ!
-ಬಾಣಭಟ್ಟ