ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೆಣ್ ಹೈಕಳು ಹಾಕುವ ನಾಮಕ್ಕೂ ಪೂಜಾರಿಗಳು...

Vishwanath S
Updated On : 22 Mar 2014, 12:45 pm

ನೇತ್ರಾ ಆನೆಕೆರೆ ಬೀದಿ, ಮಂಡ್ಯ, 8970452188
ಹೆಣ್ ಹೈಕಳು ಹಾಕುವ ನಾಮಕ್ಕೂ ಪೂಜಾರಿಗಳು ಹಾಕುವ ನಾಮಕ್ಕೂ ಇರುವ ವ್ಯತ್ಯಾಸವೇನು?
ನಾಮಕ್ಕೆ ಲಿಂಗಭೇದವಿಲ್ಲ.

ಲಕ್ಷ್ಮೀ ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9538786547
ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡೋರ ಬಗ್ಗೆ ನೀವೇನ್ ಹೇಳ್ತೀರಾ?
ಜನ ಹೀಗೆ ಹೇಳ್ತಾರೆ ಅಂತ್ಲೇ ಸೋನಿಯಾ ಗಾಂಧಿ ಮಗನನ್ನೇ ಚುನಾವಣೆಗೆ ಮುಂದೆ ಬಿಟ್ಟಿದ್ದಾರೆ!

ರವಿಕುಮಾರ ಜಿ.ಬಿ. ಬೆಂಗಳೂರು, 9449669897
ಜೀವ ವಿಮೆ ಏಜೆಂಟರನ್ನು ಕಂಡರೆ ಜನ ಕಾಣದ ಹಾಗೆ ಹೋಗುವುದೇಕೆ?
ಜೀವ ಇರುವಾಗ ಹಣ ಇಸ್ಕೊಂಡು, ಸತ್ತ ಮೇಲೆ ಬೇರೆಯವರಿಗೆ ಹಣ ಕೊಡ್ಸೋರು ಎಂಬ ಕಾರಣಕ್ಕೆ!

ಪವನಕುಮಾರ ಕೆ.ವಿ. ಬಳ್ಳಾರಿ, 9900515957
ತೆನೆಹೊತ್ತ ಮಹಿಳೆಗೆ ಕೈ ಆಸರೆಯಾಗುತ್ತಾ?
'ಕೈ' ಬಿಟ್ಟವರಿಗೆಲ್ಲಾ ತೆನೆಹೊತ್ತ ಮಹಿಳೆ ಆಶ್ರಯ ಕೊಡುತ್ತಿದ್ದಾಳೆ!

ರಮೇಶ ಭಟ್ ಆವರ್ಸೆ, ಮೈಸೂರು, 9164276058
ನೆಹರು ಮತ್ತು ಕೇಜ್ರಿವಾಲರ ನಡುವಿನ ಭಿನ್ನತೆ ಏನು?
ಅವರು ಕೋಟಿನ ಕಿಸೆಯಲ್ಲಿ ಗುಲಾಬಿ ಇಡುತ್ತಿದ್ದರು, ಇವರು ಜನರ ಕಿವಿಮೇಲೆ ಇಡುತ್ತಿದ್ದಾರೆ!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement