ರಾಜಕಾರಣಿಗಳು ಕೋರ್ಟಿನಲ್ಲಿ ಹಾಜಾರಾಗ್ತಾರಾ, ಹರಾಜಾಗ್ತಾರಾ?
ವಿ. ಹೇಮಂತ ಕುಮಾರ್, 9035992900
ರಾಜಕಾರಣಿಗಳು ಕೋರ್ಟಿನಲ್ಲಿ ಹಾಜಾರಾಗ್ತಾರಾ, ಹರಾಜಾಗ್ತಾರಾ?
ಬೇರೆಯವರನ್ನು ಹರಾಜು ಮಾಡಿ ಮಾತ್ರ
ಗೊತ್ತು ಅವರಿಗೆ.
ಬಸವನಗೌಡ ಹೆಬ್ಬಳಗೆರೆ
ಸೌಂದರ್ಯವೆಂಬುದು ಕೇವಲ ಹೆಣ್ಣಿನ ಸ್ವತ್ತೇ?
ಆಸ್ವಾದಿಸುವುದು ನಿಮ್ಮ ಸ್ವತ್ತೆಂದುಕೊಂಡು ಸಮಾಧಾನಿಸಿಕೊಳ್ಳಬಾರದಾ?
ಎಂ. ಬಿ. ಕೃಷ್ಣಮೂರ್ತಿ, 9449130531
ಮದುವೆಗೆ ಹೋದವರು ವಧು-ವರರ ಜತೆ ಫೋಟೊ-ವಿಡಿಯೋ ಕವರೇಜ್‌ಗಾಗಿ ನಿಲ್ಲುವುದು ಅನಿವಾರ್ಯವೇ?
ಕಷ್ಟಕಾಲದಲ್ಲಿ ಅವರ ಜತೆಗಿದ್ದೆವು ಎಂಬುದಕ್ಕೆ ಪುರಾವೆ!
ತೋರಗಲ್ಲ ಜಯಲಕ್ಷ್ಮೀ, ರಾಮದುರ್ಗ
ಕಲಿಯುಗದಲ್ಲಿ ಜನರ ಸುಖ-ಶಾಂತಿಗೆ ರಾಮರಾಜ್ಯ ಬರಬಹುದೇ?
ಇದು ಕೋಮುವಾದಿ ಪ್ರಶ್ನೆ!
ರವಿಕುಮಾರ್ ಜಿ. ಬಿ.
ಸಿನಿಮಾದಲ್ಲಿ ಖಳನಾಯಕ ಸಾಯೋಕೆ ಒಂದು ಗುಂಡು ಸಾಕು. ನಾಯಕನಿಗೇಕೆ ಅಷ್ಟೊಂದು ಗುಂಡು?
ಆತ ಡಿಫರೆಂಟ್ ಗಂಡು!
ಬಾಣಭಟ್ಟ