ಇಲ್ಲೊಬ್ಬ ರಿಕ್ಷಾ ಓಡಿಸಿದ್ರೂ ರಿಚ್ ಆಗಿ ಸಾಕ್ತೀನಿ ಅಂತಾನಲ್ಲಾ?
ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಪ್ರತಿ ರಾತ್ರಿಯೂ ಕತ್ತಲೆಯಾಗಿರುವಾಗ ಮತದಾನದ ಹಿಂದಿನ ರಾತ್ರಿಯನ್ನು ಮಾತ್ರ ಕತ್ತಲ ರಾತ್ರಿ ಎಂದು ಎನ್ನುವುದೇಕೆ?
ಮಧು ಮತ್ತು ಚಂದ್ರ ಎರಡೂ ಇಲ್ಲದಿದ್ದರೂ ಮಧುಚಂದ್ರ ಎಂದು ಕರೆಯುವುದಿಲ್ಲವೇ.. ಹಾಗೆ ಇದು!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಸ್ವಘೋಷಿತ ದೇವಮಾನವರಿಗೂ, ಸ್ವಘೋಷಿತ ಬುದ್ದಿಜೀವಿಗಳಿಗೂ ಇರುವ ಸಾಮ್ಯತೆಯೇನು?
ಇಬ್ಬರೂ ಸದಾ ಪ್ರಚಾರದಲ್ಲಿರುತ್ತಾರೆ!
ನಂದಯಡಿಯೂರು, 9880055196
ಇಲ್ಲೊಬ್ಬ ರಿಕ್ಷಾ ಓಡಿಸಿದ್ರೂ ರಿಚ್ ಆಗಿ ಸಾಕ್ತೀನಿ ಅಂತಾನಲ್ಲಾ?
ಹಾಗೆ ಹೋಳೋದಕ್ಕೆ ಡಬ್ಬಲ್ ಮೀಟರ್ ಇರ್ಬೇಕು ನೋಡು!
ಕೊ.ಸು. ನರಸಿಂಹಮೂರ್ತಿ, ಮೈಸೂರು
ಇಬ್ಬರು ಹೆಂಡಿರ ಮುದ್ದಿನ ಸಂಸದರೊಬ್ಬರು ತಮ್ಮ ಒಬ್ಬ ಪತ್ನಿಯ ಆಸ್ತಿಯನ್ನು ಮಾತ್ರ ಘೋಷಿಸಿದ್ದಾರಲ್ಲಾ?
ಅನಧಿಕೃತ ಆಸ್ತಿಗಳನ್ನು ಘೋಷಣೆ ಮಾಡುವ ಅವಕಾಶವಿಲ್ಲ!
ಶ್ರೀಧರ ಡಿ. ಮಾಚಮಂದ್ರ, ಚಿತ್ರದುರ್ಗ, 9880791106
ಹೆಣ್ಣಿನ ಬಸುರಿ ಹೊಟ್ಟೆಗೂ ಗಂಡಿನ ಡೊಳ್ಳು ಹೊಟ್ಟೆಗೂ ವ್ಯತ್ಯಾಸವೇನು?
ಒಂದು ತಾತ್ಕಾಲಿಕ, ಇನ್ನೊಂದು ಕಾಯಂ.
ಬಾಣಭಟ್ಟ