ಉಳಿದವರ ವೈಯಕ್ತಿಕ ವಿವರವೇನು?
ಗುಜರಾತ್ ಮುಖ್ಯಮಂತ್ರಿಗಳ ವೈವಾಹಿಕ ಜೀವನದ ಬಗ್ಗೆ (ಕ.ಪ್ರ. 20.3.14 ಪುಟ 6) ಹೇಳಿಕೆ ನೀಡಿರುವ ಜನಾರ್ದನ ಪೂಜಾರಿಯವರು ಈ ಮಾಹಿತಿಗಳ ಬಗ್ಗೆಯೂ ಸತ್ಯಾಸತ್ಯತೆಗಳನ್ನು ತಿಳಿಸಲಿ.
- ರಾಹುಲ್ ಗಾಂಧಿ ಸೆ. 2001ರಲ್ಲಿ ಬೋಸ್ಟನ್ನ ವಿಮಾನ ನಿಲ್ದಾಣದಲ್ಲಿ ತನ್ನ ಕೊಲಂಬಿಯ ಗೆಳತಿ ಡ್ರಗ್ ಮಾಫಿಯಾ ಸಂಬಂಧಿ ಎಂದೇ ಹೇಳಲಾದ ವೆರೋನಿಕಾ ಕಾರ್ಟಲ್ಲಿಯೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಡಾಲರ್ ಹಣದೊಂದಿಗೆ ಎಫ್ಬಿಐನಿಂದ ಬಂಧಿತರೇ?
- 'ರಾಹುಲ್ ವಿನ್ಸಿ' ಎಂಬ ತಮ್ಮ ನಿಜವಾದ ನಾಮಧೇಯ ಮರೆಮಾಚುತ್ತಿರುವರೇ?
- ತಮ್ಮ ವಿದ್ಯಾರ್ಹತೆ ಬಗ್ಗೆ ತಪ್ಪು ಮಾಹಿತಿ ನೀಡಿರುವರೇ?
- ವಿಕೀಲೀಕ್ಸ್ ಬಹಿರಂಗಗೊಳಿಸಿದ ಮಾಹಿತಿಯೇ ಅವರು ಅವಿವಾಹಿತರಾಗಿರಲು ಕಾರಣವೇ?
- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿವಾಹದ ಮೊದಲಿನ ಕಸುಬು, ಅವರು ತಮ್ಮ ಶಿಕ್ಷಾರ್ಹತೆಯ ಬಗ್ಗೆ ನೀಡಿರುವ ದಾಖಲೆಯ ಸತ್ಯತೆ.
ಪೂಜಾರಿಯವರ ಹೇಳಿಕೆ ಕರ್ನಾಟಕ ರಾಜ್ಯ ಹಾಲಿ ಹಾಗೂ ಮಾಜಿ ಮುಖ್ಯ ಮಂತ್ರಿಗಳೆಲ್ಲರ ವೈವಾಹಿಕ ಜೀವನ, ಸಂಬಂಧಗಳ ಬಗ್ಗೆಯೂ ಪ್ರಶ್ನೆಗಳನ್ನು ಉಂಟು ಮಾಡುವಂತಿದ್ದು, ಅಸ್ವಸ್ಥ ವಾತಾವರಣ ನಿರ್ಮಿಸುತ್ತಿದೆ. ದೇಶದ ಭವಿಷ್ಯಕ್ಕಾಗಿ ನಡೆಯುತ್ತಿರುವ, ಜಗತ್ತೇ ಗಮನಿಸುತ್ತಿರುವ ಈ ಚುನಾವಣಾ ಪ್ರತಿಷ್ಠೆಗೆ ಅಭಿವೃದ್ಧಿ ಕಾರ್ಯ ಯೋಜನೆಗಳು ಜಪವಾಗಬೇಕೇ ಹೊರತು ಅನುಚಿತ ವಿಷಯಗಳಲ್ಲ ಎಂಬುದನ್ನು ಹಿರಿಯ ನಾಯಕರು ತಿಳಿಯಬೇಕಾದ ಅವಶ್ಯಕತೆ ಇದೆ.
-ಲೀನಾ ಕುಪ್ಪಣ್ಣ, ಮೈಸೂರು.
ಸಹನೆ ಮಾರ್ಗದಲ್ಲಿ ನಡೆಯಲಿ
ಭೂ ಕಬಳಿಕೆ ಬಗ್ಗೆ ಕ.ಪ್ರ.ದಲ್ಲಿ ಬಂದ ವರದಿಯಲ್ಲಿ ಶ್ರೀ ಬಾಲ ಸುಬ್ರಮಣಿಯಂ ಹಾಗೂ ಎ.ಟಿ. ರಾಮಸ್ವಾಮಿಯವರು ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ ಶಾಸನ ಸಭೆಯಲ್ಲಿ ನಿವೃತ್ತ ಅಧಿಕಾರಿ ಬಾಲ ಸುಬ್ರಮಣಿಯಂ ವಿರುದ್ಧ ಹಕ್ಕುಚ್ಯುತಿ ಮಂಡನೆ ಪ್ರಕಟವಾಗಿದೆ. ಹಾಗೆ ಅಡ್ವೋಕೇಟ್ ಹಿರೇಮಠ -ಭೂ ಕಬಳಿಕೆ ಬಗ್ಗೆ ರಾಜಕಾರಣಿಗಳ ಬಗ್ಗೆ ದೋಷಾರೋಪಣೆ ಮಾಡಿದ್ದಕ್ಕೆ ಶಾಸನಸಭೆಯಲ್ಲಿ ಕಿಡಿಕಾರಿದ್ದಾರೆ. ಎರಡೂ ವಿಚಾರಗಳಲ್ಲೂ ಶ್ರೀಮಾನ್ ರಮೇಶ್ಕುಮಾರ್ ಪ್ರಮುಖರು. ಕೇಂದ್ರ ಬಿಂದು.
ನಮ್ಮ ಸಾಹಿತಿ ಬೈರಪ್ಪನವರು ಹೇಳುವ ಹಾಗೆ ಸತ್ಯವನ್ನು ಹುಡುಕೋಣ. ರಮೇಶ್ಕುಮಾರ್ರವರು ಹಕ್ಕುಚ್ಯುತಿ ಬಗ್ಗೆ ಪ್ರಸ್ತಾಪಿಸಿದ್ದು, ಹಿರೇಮಠರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು- ಸುದ್ದಿ ವಾಹಿನಿಗೆ ಹೋಗಿ ರಾದ್ಧಾಂತ ಮಾಡಿದ್ದು ಎಲ್ಲವೂ ಪ್ರಕಟವಾಗಿದೆ. ಜನ ಓದಿದ್ದಾರೆ. ವೀಕ್ಷಿಸಿದ್ದಾರೆ. ಆದರೆ ಅವರು "ನಾನು ಸಾರ್ವಜನಿಕ ಹಿತಕ್ಕೆ ಧಕ್ಕೆ ತಂದಿಲ್ಲ" ಅಂತ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದು ದಿನಾಂಕ 25.2.14ರಂದು ಪಿ. ತ್ಯಾಗರಾಜ್ ಬರೆದ "ವ್ಯಕ್ತಿಗತ ರಾಗ-ದ್ವೇಷಕ್ಕೆ ಶಾಸನಸಭೆ ಬಳಕೆ ಸರಿಯೇ?" ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಇವೆರಡೂ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.
ನಮ್ಮ ದಿ. ರಾಮಕೃಷ್ಣ ಹೆಗಡೆಯವರು ಮೌಲ್ಯಾಧಾರಿತ ರಾಜಕಾರಣ ಪ್ರತಿಪಾದಿಸಿದರು. ಅದರಲ್ಲಿ ಸೋತರೋ ಗೆದ್ದರೋ ವಿಚಾರ ಬೇರೆ. ಆದರೆ ಅವರ "ಗುರುತಿಸುವಿಕೆ"ಯ ಗುಣದಿಂದ ರಮೇಶ್ಕುಮಾರ್ ಶಾಸನಸಭಾಧ್ಯಕ್ಷರಾದರು. ದಕ್ಷ, ಬುದ್ಧಿವಂತ, ಸೂಕ್ಷ್ಮಮತಿ-ಮಾತುಗಾರರು. ಆದರೆ ಅಂತರಾಳ, ದ್ವಂದ್ವ ಅರ್ಥವಾಗುವುದಿಲ್ಲ. ಎಲ್ಲ ರಾಜಕಾರಣಿಗಳಂತೆ ಇವರು ಕೂಡ.
ಕ್ರಿಮಿನಲ್ ಆಪಾದನೆಯಿಂದ ಮಂತ್ರಿಗಳಾಗಿಲ್ಲ ಅನ್ನುವ ಅಭಿಪ್ರಾಯ ಗೊತ್ತಿಲ್ಲ. ಅವರ ಅಭಿಮಾನಿಯಾದವರಿಗೆ ಅನಿಸುವುದು ಇಷ್ಟೇ. ಅವರೂ ಕೂಡ ದಿ. ರಾಮಕೃಷ್ಣ ಹೆಗಡೆಯವರ ತರಹ-ತಮ್ಮನ್ನು ತಾವೇ ವಿಚಾರಣೆಗೆ ಒಳಪಡಿಸಲು ಮುಂದೆ ಬಂದು -ತದನಂತರ ದೋಷಾರೋಪಣೆಯಿಂದ ಹೊರಬಂದು ಮಂತ್ರಿಗಳಾಗಲೀ ಆ ಯೋಗ್ಯತೆ, ಶಕ್ತಿ ಇದೆ. ಅಲ್ಲಿಯವರೆಗೆ ಸಮಚಿತ್ತ ಕಾಯ್ದುಕೊಳ್ಳಲಿ.
ಟಿ ಜಗದೀಶ್, ಬೆಳವಾಡಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com