ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೈ ಪಕ್ಷದ ಹಿರಿತಲೆಗಳು ಮಹಾ ಸಮರದಲ್ಲಿ ಸ್ಪರ್ಧಿಸಲು ಹಿಂಜರಿಯುತ್ತಿರುವುದೇಕೆ?

Mainashree
Updated On : 25 Mar 2014, 10:03 am

ಮಹೇಶ್ ಸಾನಬಾಳ, ಮಸ್ಕಿ
ನಮ್ಮ ಮನೆಯ ಹತ್ತಿರ ಇರುವ ದೇವರನ್ನು ಬಿಟ್ಟು ನೂರಾರು ಕಿ.ಮೀ. ದೂರವಿರುವ ದೇವರನ್ನು ಆರಾಧಿಸುತ್ತೇವಲ್ಲಾ ಯಾಕೆ?
ಹಿತ್ತಲಗಿಡ ಮದ್ದಲ್ಲ ಎಂಬ ಮಾತು ದೇವರಿಗೂ ಅನ್ವಯವಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ!

ಚಿರಪ್ರಭ ನಂಜನಗೂಡು, 8553793107
ಕೈ ಪಕ್ಷದ ಹಿರಿತಲೆಗಳು ಮಹಾ ಸಮರದಲ್ಲಿ ಸ್ಪರ್ಧಿಸಲು ಹಿಂಜರಿಯುತ್ತಿರುವುದೇಕೆ?
ಯುವಕರಿಗೆ ಅವಕಾಶ ಎಂಬ ರಾಹುಲ್ ಮಾತನ್ನು ಈ ರೀತಿಯಲ್ಲಿ ಜಾರಿ ಮಾಡುತ್ತಿದ್ದಾರೆ.

ಬರ್ಕಲಿರಮೇಶ ಕಿರಗಂದೂರು, ಮಂಡ್ಯ, 9008741348
ಬಾ ಗೆಳೆಯ ಹೋಗೋಣ, ಮರದಡಿಯಲ್ಲಿ ಕೂರೋಣ ಅನ್ನುತ್ತಿದ್ದಾಳಲ್ಲ?
ಅಪ್ಪಿಕೋ ಚಳವಳಿಯ ಅಭಿಮಾನಿ ಇರಬೇಕು!

ಪಿ. ಗೋವಿಂದರಾಜ್, ಶಿವಮೊಗ್ಗ, 9739363071
ಬಡವನ ಕೋಪ ದವಡೆಗೆ ಮೂಲ, ಅದೇ ರೀತಿ ನವ ದಂಪತಿ ಕೋಪ?
ಡೈವೋರ್ಸ್‌ಗೆ ಮೂಲ!

ಸಂತೆಬೆನ್ನೂರು ಫೈಜ್ನಟ್ರಾಜ್
ಪ್ರೀತಿಗೆ ಎಷ್ಟು ಮುಖ ಭಟ್ರೆ?
ಮಿನಿಮಮ್ 2 ಮುಖ ಇರಲೇಬೇಕು. ಅದಕ್ಕಿಂತ ಮೇಲೆ ಅವರವರ ತಾಕತ್ತು!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement