ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಿಮಾನಗಳಲ್ಲಿಯೂ ತುರ್ತು ನಿರ್ಗಮನ ದ್ವಾರಗಳಿದ್ದರೆ ಹೇಗೆ?

Mainashree
Updated On : 26 Mar 2014, 11:08 am

ವಿ. ಹೇಮಂತಕುಮಾರ, ಬೆಂಗಳೂರು, 9035992900
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗೂ, ಚುನಾವಣೆಯಲ್ಲಿ ಸೋಲಾದ ಅಭ್ಯರ್ಥಿಗೂ ವ್ಯತ್ಯಾಸವೇನು?
ವಿದ್ಯಾರ್ಥಿ ಒಂದು ವರ್ಷದಲ್ಲಿ ಮತ್ತೆ ಪರೀಕ್ಷೆ ಬರೆಯಬಹುದು. ಅಭ್ಯರ್ಥಿ 5 ವರ್ಷ ಕಾಯಬೇಕು.

ಆರ್. ಸಿ. ಪರಶುರಾಮ, ಶಿಕಾರಿಪುರ, 9902203492
ವಿಮಾನಗಳಲ್ಲಿಯೂ ತುರ್ತು ನಿರ್ಗಮನ ದ್ವಾರಗಳಿದ್ದರೆ ಹೇಗೆ?
ಅಲ್ಲೂ ಇರುತ್ತದೆ. ಆದರೆ ಹೊರಹೋಗುವ ಧೈರ್ಯವಿರುವುದಿಲ್ಲ!

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ನಾಯಿ, ಸ್ವಾಮಿ ನಿಷ್ಠೆಗೆ ಹೆಸರಾದ ಜೀವಿ. ಆದರೆ ಮಾನವ?
ನಿಷ್ಠೆ ಮುರಿಯುವುದಕ್ಕೆ ಫೇಮಸ್ಸು!

ರವಿಕುಮಾರ ಜಿ.ಬಿ. 9449669897
ಕನ್ನಡದ ಸಿನಿಮಾ ನಟಿಯರು ಎಲ್ಲಾ ಬಿಜೆಪಿ ಸೇರುತ್ತಿದ್ದಾರೆ ಏಕೆ?
ಕಮಲ ಪ್ರೊಡಕ್ಷನ್ ಸಿನಿಮಾನೇ ಮುಂದೆ ಚೆನ್ನಾಗಿ ಓಡೋದು ಅಂತ ಅವರಿಗೂ ಗೊತ್ತಾಗಿಬಿಟ್ಟಿದೆ.

ಆರ್.ಬಿ.ಸಿ. ಕೆ.ಆರ್. ನಗರ
ಬುದ್ದಿಜೀವಿಗಳು ಅನ್ಸ್ಕೊಳ್ಳೋಕೆ ಗಡ್ಡ ಜೀವಿಗಳಾಗಲೇಬೇಕಾ?
ಗಡ್ಡ ಬೆಳೆದಂತೆಲ್ಲಾ ಬುದ್ದಿಯೂ ಬೆಳೆಯುತ್ತದೆ ಎಂಬುದು ಅವರ ಮೂಢ ನಂಬಿಕೆ!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement