ಗೆಲ್ಲುವ ಕುದುರೆ ಕಂಡುಹಿಡಿಯುವುದು ಹೇಗೆ?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹುಡುಗರು ಧರಿಸುವ ಬರ್ಮುಡ ಚಡ್ಡಿ, ಹುಡುಗಿಯರು ಧರಿಸುವ ತುಂಡು ಲಂಗದಿಂದ ರಾಷ್ಟ್ರೀಯ ಉಳಿತಾಯವೇ?
ಅದು ರಾಷ್ಟ್ರೀಯ ಮಾನ ಉಳಿತಾಯ!
ಸಂತೆಬೆನ್ನೂರು ಫೈಜ್ನಟ್ರಾಜ್
ಗೆಲ್ಲುವ ಕುದುರೆ ಕಂಡುಹಿಡಿಯುವುದು ಹೇಗೆ?
ಎಲ್ಲರೂ ಯಾವುದರ ಹಿಂದೆ ಓಡುತ್ತಿದ್ದಾರೋ ಅದೇ ಗೆಲ್ಲುವ ಕುದುರೆ!
ಚಿರಪ್ರಭ ನಂಜನಗೂಡು, 8553793107
ಸಿದ್ದರಾಮಯ್ಯ ಅವರ ಪ್ರಕಾರ ಮೋದಿ ನರಭಕ್ಷಕ. ರಾಹುಲ್?
ಅವರು ತಲೆಮಾತ್ರ ತಿನ್ನುತ್ತಾರಂತೆ!
ಕುಬೇರಪ್ಪ ಎಲ್.ವಿಭೂತಿ, ಹರಿಹರ, 9739944200
ಅಳುವ ಅಸ್ತ್ರಕ್ಕೆ ರಾಮನಗರದ ಜನ ಮರುಳಾಗಬಹುದೇ?
ಆ ಭಯದಿಂದಲೇ ಸಿದ್ರಾಮಣ್ಣ ಅಳುವ ಗಂಡಸನ್ನು ನಂಬಬೇಡಿ ಎನ್ನುತ್ತಿದ್ದಾರೆ!
ರಮೇಶ್ ಭಟ್ ಆವರ್ಸೆ, ಮೈಸೂರು, 9164276058
ಪ್ರೀತಿಗೆ ನಿಜವಾದ ಬೆಲೆ ಕೊಡೋರು ಹುಡುಗರಾ ಹುಡುಗಿಯರಾ?
ಪ್ರೀತಿ ಬೆಲೆಕಟ್ಟಲಾಗದ್ದು!
-ಬಾಣಭಟ್ಟ