ಹುಡುಕಿದೆಲ್ಲೆಡೆ ದೇವರು ಸಿಗುವಂತಿದ್ದರೆ?
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಹುಡುಕಿದೆಲ್ಲೆಡೆ ದೇವರು ಸಿಗುವಂತಿದ್ದರೆ?
ಯಾರೂ ಹುಡುಕುತ್ತಲೇ ಇರಲಿಲ್ಲ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಈಗೀಗ ವೈದ್ಯರು ರೋಗಿಯನ್ನು ಪರೀಕ್ಷೆ ಮಾಡೋ ಮೊದಲೇ ದುಡ್ಡು ತೆಗೆದುಕೊಳ್ಳೋಕೆ ಶುರು ಮಾಡಿದ್ದಾರಲ್ಲಾ?
ಪರೀಕ್ಷೆ ಮಾಡಿದ ಮೇಲೆ ಹಣ ಕೊಡಲು ಇರುತ್ತಾರಾ ಎಂಬ ಅನುಮಾನ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ನುಗ್ಗೆಕಾಯಿ ತಿಂದ ದಿನ ನನ್ನವಳು ರಾತ್ರಿಪೂರ್ತಿ ನಿದ್ದೆ ಮಾಡಲು ಬಿಡುವುದಿಲ್ಲ ಏಕೆ?
ಉಮಾಶ್ರಿ ಅವರ ಚಲನಚಿತ್ರ ಜಾಸ್ತಿ ನೋಡಬೇಡ ಅಂತ ಹೇಳು!
ಆರೀಫ್ (ಅರಿ), ದಾವಣಗೆರೆ, 9964280609
ಈ ಹುಡುಗಿಯರಿಗೆ ಐ ಲವ್ ಯು ಅಂದ್ರೆ ಜತೆಗಿರ್ತಾರೆ. ಅಕ್ಕ ಅಂದ್ರೆ ದೂರವಾಗ್ತಾರೇಕೆ?
ಅಕ್ಕ ಇರ್ತಾಲೆ ಸದಾ ಬಾವನ ಪಕ್ಕ!
ಕಾಲ್ ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಪ್ರೇಮ ಮಿತಿಮೀರಿದಾಗ?
ಮದುವೆಯಾಗುತ್ತದೆ!
ಬಾಣಭಟ್ಟ