ಮುರ್ಗಿ ನಡೆದದ್ದೇ ಮುರ್ಗನಿಗೆ ಮಾರ್ಗ
= ಹದಿ ವಯಸ್ಸಿನವರು ಹೆಚ್ಚಾಗಿ ತಪ್ಪುತ್ತಾರೆಂಬ ಆರೋಪವುಳ್ಳ ಹಾದಿ
= ದಂಡಪಿಂಡರ ಕಾಲಯಾಪನಾ ಬೀದಿ
= ಪಥಿಕರು ಅಥವಾ ರಥಿಗಳು ಸಾಗುವ ಪಥ
= ಬೀದಿ ನಾಯಿಗಳ ವಾಸಸ್ಥಳ ಅಥವಾ ಅವುಗಳಿಂದಾಗಿರುವ ವಾಸನಾ ಸ್ಥಳ
= ಕುಡುಕರ ಸ್ವರ್ಗ
= ಎಂಥಾ ಸಮಸ್ಯೆ ತಲೆದೋರಿದರೂ ಹೀಗೇ ಸಾಗಬೇಕೆಂದು ಹಿರಿಯರಿಂದ ನಿರ್ದೇಶಿಸಲ್ಪಟ್ಟಿರುವ ೋಮದಾರಿ
= ನಡೆಯಲಾರದವನಿಗೆ ಮಾರ್ಗ ಡೊಂಕು
= ಯಾವ ರಸ್ತೆಯಲ್ಲಿ ಸಾಗುತ್ತೀರೆಂಬುದು ನಿಮ್ಮ ಆಸ್ಥೆಗೆ ಬಿಟ್ಟಿದ್ದು
= ಏಕಮುಖ ಸಂಚಾರೀ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಡೆದರೆ ಯಾರೂ ಸ್ಪರ್ಧಿಗಳೇ ಸಿಗುವುದಿಲ್ಲ
= ಮಾರ್ಗಭ್ರಷ್ಟತೆ ಎಂಬುದು ಎಲ್ಲ ಭ್ರಷ್ಟತೆಗಳ ತಾಯಿ
= ಗಂಡುಬೀರಿಗಳು ಬಿಡು ಬೀಸಾಗಿ ನಡೆಯುವ ರೋಡು
= ಅಪಾಯಕ್ಕೆ ಬದಲಿ ಮಾರ್ಗ ಎನ್ನುವುದಿಲ್ಲ. ಬದಲೀ ಮಾರ್ಗವೇ ಹಲವೊಮ್ಮೆ ಅಪಾಯಕಾರಿ
= ನಾವು ಗಡಿಬಿಡಿಯಲ್ಲಿರುವಾಗಲೇ ಮಾರ್ಗ ದುರಸ್ತಿಯಲ್ಲಿರುತ್ತದೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com