ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬಳ್ಳಾರಿಯಿಂದ ಎಂ.ವಿ. ಮುರಳೀಧರ ಅವರು ಬರೆಯುತ್ತಾರೆ- 'ಮೇ 13ರಂದು 'ಬೈಟು ಕಾಫಿ'ಯಲ್ಲಿ 'ನಿರ್ದೇಶಕ...

Rashmi Kasaragodu
Updated On : 15 May 2014, 11:50 am

ಬಳ್ಳಾರಿಯಿಂದ ಎಂ.ವಿ. ಮುರಳೀಧರ ಅವರು ಬರೆಯುತ್ತಾರೆ- 'ಮೇ 13ರಂದು 'ಬೈಟು ಕಾಫಿ'ಯಲ್ಲಿ 'ನಿರ್ದೇಶಕ ಪ್ರದೀಪ್ ವರ್ಮ ಅವರ ನಿರ್ದೇಶನದ 'ಗುಲಾಬಿ ಸ್ಟ್ರೀಟ್' ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ' ಎಂದು ಪ್ರಕಟವಾಗಿದೆ. ವೇಶ್ಯೆ ಎನ್ನುವುದಕ್ಕಿಂತ ಡಾ. ಶಿವರಾಮ ಕಾರಂತರು ತಮ್ಮ 'ಬತ್ತದ ತೊರೆ' ಕಾದಂಬರಿಯಲ್ಲಿಯೇ ವೇಶ್ಯೆ ಪದಕ್ಕೆ ಕನ್ನಡ ಜಿಲ್ಲೆ (ಉತ್ತರ ಕನ್ನಡ - ದಕ್ಷಿಣ ಕನ್ನಡ) ಯಲ್ಲಿ ಹಿಂದೆ, ಈಗಲೂ ಪ್ರಚಲಿತವಿರುವ 'ಗಣಿಕೆ'ಯನ್ನು ಬಳಸಿದ್ದಾರೆ.
'ವೇಶ್ಯೆ ಪದಕ್ಕೆ ಬದಲಾಗಿ ನಿಮ್ಮ ಪತ್ರಿಕೆಯಲ್ಲಿ 'ಓಂ' ನಾಮವೆಂದು ಪ್ರಾರಂಭಿಸಿದರೆ, ಚಕ್ಕ-ಖೋಜ ಎನ್ನುವ ಜಾಗೆಯಲ್ಲಿ 'ಮಂಗಳಮುಖಿ' ಬಂದು ಕುಳಿತಂತೆ, ವೇಶ್ಯೆ ತಾಣದಲ್ಲಿ 'ಗಣಿಕೆ'ಯನ್ನು ಪ್ರತಿಷ್ಠಾಪಿಸಿದ ಹೆಸರು ನಿಮಗೂ ನಿಮ್ಮ ಪತ್ರಿಕೆಗೂ ಸಲ್ಲಿದಂತಾಗುತ್ತದೆ' ಎಂದಿದ್ದಾರೆ.
ಮೈಸೂರಿನಿಂದ ಸಿ. ದಿನಮಣಿರಾವ್ ಅವರು ಬರೆಯುತ್ತಾರೆ- 'ಮೇ 5ರಂದು ಕ.ಪ್ರ. ಮೈಸೂರು ಆವೃತ್ತಿ ಪುಟ 3 ಇಲ್ಲಿ ಪ್ರಕಟವಾಗಿರುವ 'ಬಸ್ ಪ್ರಯಾಣ ದರ ಹೆಚ್ಚಳ ಎಷ್ಟು?' ಶೀರ್ಷಿಕೆಯಲ್ಲಿ ಮೈಸೂರಿನಿಂದ- ಕೊಲ್ಕತ್ತಾಕ್ಕೆ ಹಿಂದೆ 168.00 ರೂ. ಈಗ 174 ಎಂದಿದೆ. ಮೈಸೂರಿನಿಂದ ಪಶ್ಚಿಮ ಬಂಗಾಳದ ಕೊಲ್ಕತ್ತಾಕ್ಕೆ ಸಾರಿಗೆ ಬಸ್ ಇಲ್ಲಾ.'
'ಇದು ಸಣ್ಣ ತಪ್ಪು ಅಲ್ಲವಾದ್ದರಿಂದ ತಮ್ಮ ಗಮನಕ್ಕೆ ತರುತ್ತಿದ್ದೇನೆ. ನಿಮ್ಮ ತಪ್ಪು ಇಲ್ಲವಾದಲ್ಲಿ ಇದನ್ನು ಕೆಎಸ್ಆರ್ಟಿಸಿ ಮುದ್ರಣಕ್ಕೆ ಹಾಕುವವರಿಗೆ ಇದು ಗೊತ್ತಿರಬೇಕಲ್ಲವೇ? ಅಥವಾ ಈ ಮಾಹಿತಿ ಕ.ರಾ.ರ. ಸಾ. ಸಂಸ್ಥೆಗೆ ತಿಳಿಯದೆ ಇರುವಷ್ಟು ದಡ್ಡರೆ? ಅದು "ಕೊಲ್ಕತ್ತಾ" ಅಲ್ಲ "ಕಲ್ಲಿಕೋಟೆ" ಎಂದಿರಬೇಕು. ಕಲ್ಲಿಕೋಟೆ ಕೇರಳ ರಾಜ್ಯದಲ್ಲಿದೆ ಹಾಗೂ ಗುಂಡ್ಲುಪೇಟೆಗೆ ಹತ್ತಿರದ ಕೇರಳ ಗಡಿ ಜಿಲ್ಲೆ' ಎಂದಿದ್ದಾರೆ.
ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಮೇ 5ರ 'ಬೈಟು ಕಾಫಿ'ಯಲ್ಲಿ ನಾಗಲಕ್ಷ್ಮಿ ಕಡೂರು ಅವರ 'ವಿದೇಶಿ ಹಕ್ಕಿಗಳ ಸ್ವದೇಶಿ ಗೂಡು' ಲೇಖನದಲ್ಲಿ ಅವರಿಗೆ ತಕ್ಕ ಉದ್ಯೋಗ ಭಾರತದಲ್ಲಿಲ್ಲವೆಂದು ಬಹುಶಃ ಭಾರತ ಎಂದಿರಬೇಕಾದಲ್ಲಿ 'ತ' ಬಿಟ್ಟುಹೋಗಿರುವುದರಿಂದ ಲೇಖನದ ಭಾರ ಹೆಚ್ಚಾಯ್ತು ಎನಿಸುತ್ತಿದೆ.'
'ವಿದೇಶದಲ್ಲಿರುವ ನಮ್ಮ ಸಮಾನ ವಯಸ್ಸಿನ ಭಾರತದ ವ್ಯಕ್ತಿಗಳು ಕನ್ನಡ/ಸ್ಥಳೀಯ ಭಾಷೆಗಳನ್ನಾಡಬಲ್ಲವರಾದರೆ, ಅವರ ಮಕ್ಕಳು/ಮೊಮ್ಮಕ್ಕಳು ನಮ್ಮ ನೆಲದ ಭಾಷೆಯನ್ನೇ ಅಭ್ಯಾಸ ಮಾಡಿಕೊಂಡಿಲ್ಲವೆಂಬುದು ಸತ್ಯ!
(ಕೊನೆಗಾಲಕ್ಕೂ) ತಮ್ಮ ಹಿರಿಯರ ಅಂತ್ಯ ಸಂಸ್ಕಾರಕ್ಕೂ ಬಾರಲು ಆಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಇದ್ದಾರೆ' ಎಂದಿದ್ದಾರೆ.
ಬೆಂಗಳೂರಿನ ಬನಶಂಕರಿ 3ನೇ ಹಂತದಿಂದ ಬೆಳ್ಳಾವೆ ರಮೇಶ್ ಅವರು ಬರೆಯುತ್ತಾರೆ- 'ಎಷ್ಟೇ ಅಡ್ಜೆಸ್ಟ್ ಮಾಡ್ಕೊಂಡು ಓದ್ತಾ ಹೋದ್ರೂ ಕೆಲವು ತಪ್ಪುಗಳು ಅಚಾನಕ್ ಆಗಿ ಕಣ್ಣಿಗೆ ಬೀಳ್ತವೆ. ಉಪಸಂಪಾದಕನಾಗಿದ್ದ ನನಗೆ ಇವೆಲ್ಲ ಮಾಮೂಲು. ದಿ.7ರ ಸಂಚಿಕೆಯಲ್ಲಿ 60ಳ40 ನಿವೇಶನಗಳನ್ನು ಖರೀದಿಸಿ 'ಚೌಕಾರ'ದಲ್ಲಿ ನಿರ್ಮಿಸಲಾಗಿದೆ ಅಂತಿದೆ. ಇಲ್ಲಿ ಕಾ ಮಿಸ್ ಆಗಿದೆ. ಅದು ಚೌಕಾಕಾರ ಆಗಬೇಕು. ಬೈಟೂಕಾಫಿಯಲ್ಲಿ ಒಂಟಿಯಲ್ಲ ಒಂಟಿಮನೆ ಖಾನ್ ಸಾಹೇಬರ ಬಗ್ಗೆ ಬರೆಯುತ್ತಾ ಖಾನ್ರ ಸಂಪರ್ಕ ಎಂಬಲ್ಲಿ ಎಲ್.ಎ. ಖಾನ್ ಅಂತಿದೆ. ಅದು ಎನ್.ಎ. ಖಾನ್ ಅಂತಿರಬೇಕು' ಎಂದಿದ್ದಾರೆ.

 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement