'ಮಾ ನಿಷಾದ...' ಎಂಬ ವಾಲ್ಮೀಕಿಯ ಮಾತೇ ಜಗತ್ತಿನ ಮೊದಲ ನಿಷೇಧ ವಾಕ್ಯ
ನಿಷೇಕದ ಸಮಯದಲ್ಲಿ ಸಂಗಾತಿಯ ಜೊತೆ ಮಾಡಬಾರದ ಸಂಗತಿಗಳು
ಮನಸ್ಸು ಸಿದ್ಧ. ಆದರೆ ಬೇಡವೆಂದು ತಡೆಯೊಡ್ಡಿದ್ದರೆ ಅದು ನಿಷಿದ್ಧ
ಸಂಸ್ಕೃತದಲ್ಲಿ 'ಮಾ' ಎಂದು ಆರಂಭಿಸಿದರೆ ಅದು 'ಮಾ'ಡಬೇಡಿ ಎಂಬರ್ಥದ ನಿಷೇಧಾರ್ಥಕವೇ ಆಗುತ್ತದೆ
ಕಾನೂನಿನ ಮೂಲಕ ನಮ್ಮ ಕಾನ್(ಕಿವಿ) ತಿರುವಿ ಸಲ್ಲ ಎಂದು ಹೇಳಿದ ಸೊಲ್ಲು
ನಕಲುಗಳಿಗೆ ಸರಕಾರ ವಿಧಿಸಿದ 'ನ'ಕಾರ
ನಿಷೇಧವನ್ನು ಹೇರಲಾಗುತ್ತದೆ ಆದರೆ ಇಳಿಸಲಾಗುವುದಿಲ್ಲ
ವಿವಾಹ ಪೂರ್ವ 'ಕೂಡುವಿಕೆ'ಗೆ ಸಂಪ್ರದಾಯ ಹೇಳುವ 'ಕೂಡದು'
ಸಮಾಜ ಕೆಟ್ಟು ಹೋಗದಂತೆ ತಡೆಯಲು ಹಾಕುವ ತಡೆ ಈ ಕಟ್ಟಳೆ
ಬ್ಯಾನರ್ ಹಾಕಿ ಪ್ರಚಾರ ಮಾಡಬಾರದೆಂದು ಚುನಾವಣಾ ಅಯೋಗ ಹೇರಿದ ಬ್ಯಾನ್
ಅಪಸಿದ್ಧಾಂತಗಳನ್ನು ಪ್ರಸರಿಸುವ ಕೃತಿಗಳಿಗೆ ಹುಟ್ಟುವ ಮೊದಲೇ ಕುಡಿಸಲಾಗುವ ವಿಷ
ನಿಷಧ ರಾಜ್ಯದಲ್ಲಿ ಜಾರಿಯಲ್ಲಿರುವ ಅಕರ್ತವ್ಯತಾ ಕಾನೂನು
ದಾಟಬಾರದೆಂದು ಹಾಕುವ ಲಕ್ಷ್ಮಣ ರೇಖೆ
ಮೀರಲೆಂದೇ ಇರುವಂಥದ್ದು
ಸತಿ-ಪತಿಗಳಿಗೆ ಹಾಕಲ್ಪಡುವ ಮಿತಿ
-ವಿಶ್ವನಾಥ ಸುಂಕಸಾಳ
vishwasunkasal@yahoo.com