ಜೀವನದಲ್ಲಿ ನಮ್ಮ ಸಂಕಲ್ಪ ಶಕ್ತಿಯನ್ನು ಪರೀಕ್ಷೆಗೊಡ್ಡುವ ಹಲವು ಸಂಗತಿಗಳು ನಡೆಯುತ್ತವೆ. ಒಮ್ಮೊಮ್ಮೆ ಅಂಥ ಪರೀಕ್ಷೆಯ ಘಟನೆಗಳು ಏಕಕಾಲದಲ್ಲಿ ನಡೆಯಬಹುದು ಅಥವಾ ಹಂತ ಹಂತವಾಗಿ ಸವಾಲುಗಳು ಎದುರಾಗಬಹುದು. ಅವುಗಳೆಲ್ಲ ನಮ್ಮನ್ನು ಜೀವನದಲ್ಲಿ ಮತ್ತಷ್ಟು ಗಟ್ಟಿಗೊಳಿಸಲು ಇರುವ ಪರೀಕ್ಷಾ ವ್ಯವಸ್ಥೆ. ಹೀಗಾಗಿ ಬಾಳಿನ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು.