= ಮೊದಲು ಒಂದು, ಎರಡು ಆಮೇಲೆ ಬರುತ್ತದೆ ಸಾಮಾನ್ಯವಾಗಿ...
= ಎರಡರ ಅರ್ಧಾಂಗಿ
= ಒಂದನ್ನು ಒಂದಕ್ಕೆ ಸೇರಿಸಿದರೆ ಒಂದೇ ಆಗುವುದುಂಟು. ಉದಾ: ಜೀವ ಈಶ್ವರ = ಬ್ರಹ್ಮ
= ಒಂದಾಗುವ ಮೊದಲು ಎರಡಾಗಿರಬೇಕಾಗುತ್ತದೆ
= ಮೂರರ ಒಂದ್ ಮೂರಂಶ
= ಎರಡು ಎಂಬ ಕಲ್ಪನೆಗೆ ತಳಹದಿಯಾಗಿ ಇರುವ ವಾಸ್ತವ
ಅನೇಕದೊಳಗಿನ ಸ್ವತಂತ್ರ ಭಾಗ ಈ ಏಕ
= ಸೃಷ್ಟಿಯೆಂಬ ಅನೇಕಕ್ಕಿಂತ ಮುಂಚೆ ಸೃಷ್ಟಾ ಎಂಬ ಏಕವೊಂದೇ ಇತ್ತು.
= ದ್ವೈತವನ್ನು ತೋರಿಸುವ ಮಾಯಿಕ ಈ ಅದ್ವೈತ
= ಒಂದು ಮಾಡುವುದು ಅದೆಷ್ಟು ಕಷ್ಟವೆಂಬುದು ಸಾರ್ವಜನಿಕ ಮೂತ್ರಿಗಳಲ್ಲಿ ಅರಿ
= ಒಂದು ಎರಡರ ಅರ್ಧಾಂಗಿ, ಎರಡು ಒಂದರ ಸಂತಾನ
= ಭೂಮಿಯಿರುವುದು ಒಂದೇ ಒಂದು. ಹಾಗಾಗಿ ಕಂಡಕಂಡಲ್ಲಿ 'ಒಂದು' ಮಾಡಿ ಅದರ ಅಂದಗೆಡಿಸಬಾರದು
ಅನೇಕ ಎಂಬುದು ಅನೃತ. ಏಕವೇ ಋತ
= ಒಂದು ಎಂದರೆ ಮತ್ತೊಂದಕ್ಕೆ ಅವಕಾಶವಿದೆ. ಒಂದೇ ಒಂದು ಎಂದರೆ ಇಲ್ಲ
= ದ್ವೈತಾಭಾವ ಉಪಲಕ್ಷಿತ ಜೀವಾಭಿನ್ನ ಏಕಮೇವ ಅದ್ವಿತೀಯ ಸಚ್ಚಿದಾನಂದ ಬ್ರಹ್ಮದ ಪ್ರತೀಕ
ವಿಶ್ವನಾಥ ಸುಂಕಸಾಳ