ಸಂಗ್ರಹ ಚಿತ್ರ 
ಸ್ವಾರಸ್ಯ

ಮಂಡ್ಯ: ಸ್ಟಾರ್ ಪ್ರಚಾರವಷ್ಟೇ ಅಲ್ಲ, ಸಮಸ್ಯೆಗಳ ಬಗ್ಗೆಯೂ ಅರಿವಿರಬೇಕು!

ಹಾಲಿ ಲೋಕಸಭಾ ಚುನಾವಣೆಯಲ್ಲಿ ಇತರೆ ಲೋಕಸಭಾ ಕ್ಷೇತ್ರಗಳಿಗಿಂತ ಮಂಡ್ಯ ಲೋಕಸಭಾ ಕ್ಷೇತ್ರ ಹೆಚ್ಚೆಚ್ಚು ಸುದ್ದಿಯಾಗುತ್ತಿದೆ.

ಮಂಡ್ಯ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಇತರೆ ಲೋಕಸಭಾ ಕ್ಷೇತ್ರಗಳಿಗಿಂತ ಮಂಡ್ಯ ಲೋಕಸಭಾ ಕ್ಷೇತ್ರ ಹೆಚ್ಚೆಚ್ಚು ಸುದ್ದಿಯಾಗುತ್ತಿದೆ.
ಪ್ರಮುಖವಾಗಿ ಇತ್ತೀಚೆಗೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದ್ದು, ಇದೇ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಕೂಡ ಮೊದಲ ಬಾರಿಗೆ ಸರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಿಗೆ ಪ್ರತಿಷ್ಟೆಯ ಕಣವಾಗಿದ್ದು, ಕಾಂಗ್ರೆಸ್ ಪಾಲಿಗೆ ಮೈತ್ರಿ ಧರ್ಮ ಪಾಲನೆಯ ಪ್ರಶ್ನೆಯಾಗಿದೆ. ಇನ್ನು ಸುಮಲತಾ ಅವರ ಪಾಲಿಗೆ ರೆಬೆಲ್ ಸ್ಚಾರ್ ಅಂಬರೀಶ್ ಅಭಿಮಾನಿಗಳ ಗೌರವ ಮತ್ತು ಅಸ್ತಿತ್ವದ ಪ್ರಶ್ನೆಯಾಗಿದೆ.
ನಟರ ಸ್ಪರ್ಧೆಯಿಂದಾಗಿಯೇ ಸುದ್ದಿಯಾಗಿರುವ ಮಂಡ್ಯದಲ್ಲಿ ಸ್ಟಾರ್ ನಟರ ಪ್ರಚಾರ ತಾರಕಕ್ಕೇರುವುದರಲ್ಲಿ ಎರಡು ಮಾತಿಲ್ಲ. ಸುಮಲತಾ ಅವರ ಪರವಾಗಿ, ದೊಡ್ಡಣ್ಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಸ್ಯಾಂಡಲ್ ವುಡ್ ಸ್ಟಾರ್ ನಟರಾದ ದರ್ಶನ್ ಹಾಗೂ ಯಶ್ ಅವರು ಪ್ರಚಾರ ನಡೆಸಲಿದ್ದು, ಇವರು ಮಾತ್ರವಲ್ಲದೇ ಪ್ರಸ್ತುತ ಬಿಜೆಪಿಯಲ್ಲಿರುವ ನಟ ಜಗ್ಗೇಶ್ ರಂತಹ ಘಟಾನುಘಟಿ ನಟರು ಸುಮಲತಾ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಹೀಗಾಗಿ ಸುಮಲತಾ ಪರ ಸ್ಯಾಂಡಲ್ ವುಡ್ ನಿಂತಿದ್ದರೆ, ಅತ್ತ ನಿಖಿಲ್ ಪರ ಎಚ್ ಡಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಜೆಡಿಎಸ್ ಮಿತ್ರ ಪಕ್ಷ ಕಾಂಗ್ರೆಸ್ ಕೂಡ ನಿಖಿಲ್ ಪರ ಪ್ರಚಾರ ಮಾಡುವಂತೆ ಕೈ ಕಾರ್ಯಕರ್ತರಿಗೆ ಮನವಿ ಮಾಡುತ್ತಿದೆ.
ಆದರೆ ಇಲ್ಲಿ ಕಾಡುವ ಪ್ರಶ್ನೆ ಕೇವಲ ಸ್ಟಾರ್ ಪ್ರಚಾರದಿಂದಲೇ ಮಂಡ್ಯ ಗೆಲ್ಲಬಹುದೇ..? ಖಂಡಿತಾ ಇಲ್ಲ. ಇದಕ್ಕೆ ಈ ಹಿಂದೆ ಸ್ಪರ್ಧಿಸಿ ಗೆದ್ದು ಬಳಿಕ ಮಕಾಡೆ ಮಲಗಿದ್ದ ನಟಿ ರಮ್ಯಾ ಅವರೇ ಸ್ಪಷ್ಟ ಉದಾಹರಣೆ, ಹಿಂದೆ ಅಂಬರೀಶ್ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಗೆದ್ದು ಸ್ಪರ್ಧಿಸಿ ಗೆದ್ದಿದ ರಮ್ಯಾ ಬಳಿಕ ಕ್ಷೇತ್ರದ ಕುರಿತು ನಿರ್ಲಕ್ಷ್ಯ ತೋರಿದ್ದರು. ಇದೇ ಕಾರಣಕ್ಕೆ ಅವರು ಬಳಿಕದ ಚುನಾವಣೆಯಲ್ಲಿ ಸೋತಿದ್ದರು. ಮಂಡ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲ ಸಮಸ್ಯೆಗಳ ಬಗ್ಗೆ ಸ್ಪರ್ಧಿಗಳಿಗೆ ಅರಿವಿರಬೇಕು. ಮಂಡ್ಯದಲ್ಲಿ ನಿರುದ್ಯೋಗ, ನೀರಿನ ಸಮಸ್ಯೆ ಪ್ರಮುಖವಾಗಿದ್ದು, ಕಾವೇರಿ ವಿಚಾರ ಬಂದಾಗಲೆಲ್ಲಾ ಮಂಡ್ಯ ಹೊತ್ತಿ ಉರಿಯುತ್ತದೆ. 
ಕೃಷಿ ಇಲ್ಲಿನ ಪ್ರಮುಖ ಉದ್ಯೋಗವಾಗಿದ್ದರೂ, ನೀರಿನ ಅಭಾವ ಮತ್ತು ಮಳೆ ಕೊರತೆಯಿಂದಾಗಿ ಇಲ್ಲಿನ ಯುವಕರು ಕೃಷಿಯಿಂದ ವಿಮುಖರಾಗಿ ಮೈಸೂರು ಬೆಂಗಳೂರಿನತ್ತ ಉದ್ಯೋಗಕ್ಕಾಗಿ ಗುಳೆ ಹೊರಟಿದ್ದಾರೆ. ಹೀಗಾಗಿ ಇಲ್ಲಿನ ಗ್ರಾಮಗಳಲ್ಲಿ ವಯಸ್ಸಾದವರೇ ತುಂಬಿ ತುಳುಕುತ್ತಿದ್ದು, ಕೃಷಿ ಮೂಲೆಗುಂಪಾಗಿದೆ. ಸಕ್ಕರೆ ನಾಡು ಎಂದೇ ಖ್ಯಾತಿ ಪಡೆದಿರುವ ಮಂಡ್ಯದಲ್ಲಿ ಕಬ್ಬು ಪ್ರಮುಖ ಬೆಳೆ. ಆದರೆ ಇಲ್ಲಿನ ಮೈಶುಗರ್ ಸಕ್ಕರೆ ಕಾರ್ಖಾನೆ ಸ್ಥಗಿತವಾಗಿದೆ. ಇದನ್ನು ಮತ್ತೆ ಪುನಾರಂಭಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆಯಾದರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅದು ಪ್ರಗತಿಯಾಗಿಲ್ಲ. ಇನ್ನು ಕಬ್ಬಿಗೆ ಬೆಂಬಲ ಬೆಲೆ ಇಲ್ಲದೇ ರೈತರು ಸಂಕಷ್ಟ ಪಡುತ್ತಿದ್ದಾರೆ. ಅಂತೆಯೇ ರಾಜ್ಯದ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಮೊತ್ತ ಪಾವತಿ ಮಾಡದ ಕಾರಣ ರೈತರು ಸಾಲ ತೀರಿಸಲಾಗಿದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯದಲ್ಲಿ ಸಾಕಷ್ಟು ಗಾರ್ಮೆಂಟ್ಸ್ ಗಳು, ವಾಣಿಜ್ಯ ಕಾರ್ಖಾನೆಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು ತಲೆ ಎತ್ತಿವೆಯಾದರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. 
ಇನ್ನು ಸರ್ಕಾರದ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ, ಸಾಲಮನ್ನಾ, ಉಜ್ವಲ ಯೋಜನೆ ತಕ್ಕಮಟ್ಟಿಗೆ ಬಡವರಿಗೆ ನೆರವಾಗಿದೆಯಾದರೂ, ಇಲ್ಲಿನ ಸ್ಥಳೀಯ ಅಧಿಕಾರಿಗಳ ಮೇಲಾಟದಿಂದಾಗಿ ಸಂಪೂರ್ಣವಾಗಿ ಫಲಾನುಭವಗಳ ತಲುಪಿಲ್ಲ. ಇನ್ನು ಆಶ್ರಯ ಯೋಜನೆ, ಪಶುಭಾಗ್ಯ, ಮುದ್ರಾ ಸಾಲ ಯೋಜನೆಗಳ ಕುರಿತು ಮಂಡ್ಯ ಜನತೆಗೆ ಅರಿವೇ ಇಲ್ಲ ಎನ್ನಬಹುದು ಎನ್ನುವಷ್ಟರ ಮಟ್ಟಿಗೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಕಾರಣ ಕೇಂದ್ರ ಸರ್ಕಾರ ಯೋಜನೆಗಳು ಎಂಬ ಕಾರಣಕ್ಕೇ ಈ ಯೋಜನೆಗಳನ್ನು ಸ್ಥಳೀಯ ಮುಖಂಡರು ಮೂಲೆಗುಂಪು ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್