ಸಂಸತ್ ಭವನ 
ಸ್ವಾರಸ್ಯ

430 ಕೋಟ್ಯಧಿಪತಿ ಸಂಸದರು, 174 ಸಂಸದರ ವಿರುದ್ಧ ಕ್ರಿಮಿನಲ್‍ ಮೊಕದ್ದಮೆ!

ದೇಶದಲ್ಲಿನ ಒಟ್ಟು 521 ಹಾಲಿ ಸಂಸದರ ಪೈಕಿ ಶೇ. 33ರಷ್ಟು ಅಂದರೆ, 174 ಸಂಸದರ ವಿರುದ್ಧ ಕ್ರಿಮಿನಲ್‍ ಮೊಕದ್ದಮೆಗಳಿವೆ!

ಬೆಂಗಳೂರು: ದೇಶದಲ್ಲಿನ ಒಟ್ಟು 521 ಹಾಲಿ ಸಂಸದರ ಪೈಕಿ ಶೇ. 33ರಷ್ಟು ಅಂದರೆ, 174 ಸಂಸದರ ವಿರುದ್ಧ ಕ್ರಿಮಿನಲ್‍ ಮೊಕದ್ದಮೆಗಳಿವೆ! ಇವರಲ್ಲಿ ಶೇ.20ರಷ್ಟು ಅಂದರೆ, 106 ಸಂಸದರ ವಿರುದ್ಧ ಕೊಲೆ,  ಕೊಲೆ ಯತ್ನ, ಕೋಮುಸೌಹಾರ್ದತೆ ಹಾಳುಗೆಡುವ ಯತ್ನ, ಅಪಹರಣ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯ ಸೇರಿ ಹಲವು ಗಂಭೀರ ಆರೋಪಗಳಿವೆ.
ಚುನಾವಣಾ ಕಣ್ಗಾವಲು ಸಮಿತಿ 'ಎಲೆಕ್ಷನ್ ವಾಚ್ ' ಬಿಡುಗಡೆ  ಮಾಡಿರುವ ಹೇಳಿಕೆಯಲ್ಲಿ, ಬಿಜೆಪಿ 4, ಕಾಂಗ್ರೆಸ್, ಎನ್‍ಸಿಪಿ, ಎಲ್ ಜೆಡಿ,  ಆರ್ ಜೆಡಿ, ಸ್ವಾಭಿಮಾನಿ ಪಕ್ಷದ ತಲಾ ಓರ್ವ ಹಾಗೂ ಓರ್ವ ಪಕ್ಷೇತರ ಸಂಸದರು ತಮ್ಮ  ವಿರುದ್ಧದ ಹತ್ಯೆಯ ಕ್ರಿಮಿನಲ್‍ ಪ್ರಕರಣಗಳನ್ನು ಚುನಾವಣಾ ಪ್ರಮಾಣಪತ್ರದಲ್ಲಿ ಘೋಷಿಸಿರುವಾಗಿ ತಿಳಿಸಿದೆ. 
ಬಿಜೆಪಿಯ 8, ಕಾಂಗ್ರೆಸ್, ಎನ್‍ಸಿಪಿ, ಆರ್ ಜೆಡಿ, ಶಿವಸೇನೆ  ಹಾಗೂ ಸ್ವಾಭಿಮಾನಿ ಪಕ್ಷದ ಓರ್ವ ಸೇರಿ 14 ಸಂಸದರು ತಮ್ಮ ವಿರುದ್ಧ ಹತ್ಯೆ ಯತ್ನ,  ಬಿಜೆಪಿ 10, ಟಿಆರ್ ಎಸ್, ಪಿಎಂಕೆ, ಅಖಿಲ ಭಾರತ ಮಜ್ಲೀಸ್‍ -ಇ-ಇತ್ತೆಹಾದುಲ್  ಮುಸ್ಲಿಮೀನ್‍ ಹಾಗೂ ಎಐಯುಡಿಎಫ್‍ ಪಕ್ಷದ ತಲಾ ಒಬ್ಬರು ಸೇರಿ 14 ಸಂಸದರು ತಮ್ಮ ವಿರುದ್ಧ  ಕೋಮುಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪಗಳಿರುವುದಾಗಿ ಪ್ರಕಟಿಸಿದ್ದಾರೆ. 
ಪಕ್ಷವಾರು ಕ್ರಿಮಿನಲ್‍ ಪ್ರಕರಣಗಳು 
ಬಿಜೆಪಿಯಲ್ಲಿ ಅತಿ ಹೆಚ್ಚು ಎಂದರೆ 92, ಕಾಂಗ್ರೆಸ್ 45,  ಎಐಎಡಿಎಂಕೆಯ 6, ಶಿವಸೇನೆಯ 15, ಎಐಟಿಸಿಯ 7 ಸಂಸದರ ವಿರುದ್ಧ ಕ್ರಿಮಿನಲ್‍ ಹಾಗೂ  ಬಿಜೆಪಿಯ 58, ಕಾಂಗ್ರೆಸ್‍ ನ 2, ಎಐಎಡಿಎಂಕೆಯ 3, ಶಿವಸೇನೆಯ 8, ಎಐಟಿಸಿಯ 4 ಸಂಸದರ  ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. 
430 ಸಂಸದರು ಕೋಟ್ಯಧಿಪತಿಗಳು 
521 ಸಂಸದರ ಪೈಕಿ ಶೇ. 83ರಷ್ಟು ಎಂದರೆ, 430 ಸಂಸದರು ಕೋಟ್ಯಧಿಪತಿಗಳು!
ದೇಶದ 32 ಹಾಲಿ ಸಂಸದರ ಆಸ್ತಿ 50 ಕೋಟಿ ರೂ.ಗಳಿಗೂ ಹೆಚ್ಚಿದೆ. ಇದರಲ್ಲಿ 3 ಅತಿ ಹೆಚ್ಚು ಶ್ರೀಮಂತರೆಂದರೆ, ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದ ಜಯದೇವ ಹೊಳ್ಳ 683 ಕೋಟಿ ರೂ., ತೆಲಂಗಾಣದ ಚೆವೆಲ್ಲಾ ಕ್ಷೇತ್ರದ ಕೊಂಡ ವಿಶ್ವೇಶ್ವರ ರೆಡ್ಡಿ (528 ಕೋಟಿ ರೂ.), ಆಂಧ್ರಪ್ರದೇಶದ ನರಸಾಪುರದ ಗೋಕರಾಜು ಗಂಗರಾಜು (288 ಕೋಟಿ ರೂ.) ಎಂದು ಗುರುತಿಸಲಾಗಿದೆ.
ರಾಜಸ್ತಾನದ ಸಿಕರ್ ಕ್ಷೇತ್ರದ ಸಂಸದ ಸುಮೇದ್ ನಂದ ಸರಸ್ವತಿ  ಅವರು ಅತಿ ಕಡಿಮೆ ಎಂದರೆ ಕೇವಲ 34 ಸಾವಿರ ಆದಾಯ ಹಾಗೂ ಪಶ್ಚಿಮ ಬಂಗಾಳದ ಜಾಗ್ರಾಮ್‍ ಕ್ಷೇತ್ರದ ಉಮಾ ಸರೇನ್ 4 ಲಕ್ಷ ರೂ. ಆದಾಯ ಘೋಷಿಸಿದ್ದಾರೆ. 
ಕೇವಲ 66 ಮಹಿಳಾ ಸಂಸದರು
 521 ಸಂಸದರ ಪೈಕಿ ಕೇವಲ 66 ಮಹಿಳಾ ಸಂಸದರಿದ್ದು, 455 ಪುರುಷ ಸಂಸದರಿದ್ದಾರೆ. ಇದರ  ಸರಾಸರಿ 13:87ರಷ್ಟಿದೆ. 206 ಸಂಸದರು 25ರಿಂದ 50 ವರ್ಷ ವಯೋಮಿತಿಯವರಾಗಿದ್ದು, 281  ಸಂಸದರು 50ರಿಂದ 70 ವರ್ಷ ವಯಸ್ಸಿನವರಾಗಿದ್ದಾರೆ. 34 ಸಂಸದರು 71 ವರ್ಷ  ಮೀರಿದವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು