ಛಾಪಾ ಕಾಗದದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಸೇನಾ
ಅಮರಾವತಿ: ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಶತಾಯಗತಾಯ ಮತದಾರರ ಮನಗೆಲ್ಲಲು ರಾಜಕೀಯ ನಾಯಕರು ವಿನೂತನ ಪ್ರಯತ್ನಗಳಿಗೆ ಕೈಹಾಕುತ್ತಿದ್ದಾರೆ.
ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಆಂಧ್ರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ರಣಕಣಕ್ಕೆ ಧುಮುಕಿರುವ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಬಾಂಡ್ ಪೇಪರ್ ನಲ್ಲಿ ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜನಸೇನಾ ಪಕ್ಷದ ವಿಶಾಖಪಟ್ಟಣಂ ಕ್ಷೇತ್ರದ ಅಭ್ಯರ್ಥಿ ಜೆಡಿ ಲಕ್ಷ್ಮೀ ನಾರಾಯಣ್ ಅವರು, ಬಾಂಡ್ ಪೇಪರ್ ನಲ್ಲಿ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿರುವ ಅಷ್ಟೂ ಅಂಶಗಳನ್ನು ಈಡೇರಿಸುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.
ಅಲ್ಲದೆ ಪ್ರಣಾಳಿಕೆಯಲ್ಲಿನ ಅಂಶಗಳು ಈಡೇರಿಸದಿದ್ದರೆ ಈ ಬಾಂಡ್ ಪೇಪರ್ ಮೂಲಕ ಕೋರ್ಟ್ ನಲ್ಲಿ ನನ್ನ ವಿರುದ್ಧ ಮೊಕದ್ದಮೆ ದಾಖಲಿಸಬಹುದು. ಈ ಪ್ರಮಾಣಿಕತೆ ಮತ್ತು ದೈರ್ಯ ತಮ್ಮ ಪಕ್ಷಕ್ಕೆ ಮಾತ್ರವಿದೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಇದೀಗ ಜನಸೇನಾ ಪಕ್ಷದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos