ನವದೆಹಲಿ: ಖ್ಯಾತ ಗಾಯಕ ದಲೇರ್ ಮೆಹಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ವಿಜಯ್ ಗೋಯೆಲ್ ಹಾಗೂ ವಾಯುವ್ಯ ದೆಹಲಿ ಬಿಜೆಪಿ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್ ಸಮ್ಮುಖದಲ್ಲಿ ಇಂದು ದಲೇರ್ ಮೆಹಂದಿ ಕೇಸರಿ ಪಕ್ಷ ಸೇರಿದರು.
ಈ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನೇಕ ಮಂದಿ ಸೆಲೆಬ್ರಿಟಿಗಳು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಇವರ ಗುಂಪಿಗೆ ಇದೀಗ ಗಾಯಕ ದಲೇರ್ ಮೆಹಂದಿ ಕೂಡಾ ಸೇರ್ಪಡೆಯಾದಂತಾಗಿದೆ.
ಗೋರಕ್ ಪುರ- ಬೋಜ್ ಪುರಿ ನಟ ರವಿ ಕಿಶನ್, ಅಜಂಘಡ- ದಿನೇಶ್ ಯಾದವ್ , ರಾಮ್ ಪುರ- ಜಯಪ್ರದಾ, ತ್ರಿಸೂರ್ - ಸುರೇಶ್ ಗೋಪಿ, ಗುರುದಾಸ್ ಪುರ- ಸನ್ನಿ ಡಿಯಾಲ್ ಹಾಗೂ ಕ್ರಿಕೆಟಿಗ ಗೌತಮ್ ಗಂಭೀರ್ ಪೂರ್ವ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.