ದೇಶ

ಗೋವಾ ಉಪಚುನಾವಣೆ: ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

Raghavendra Adiga
ನವದೆಹಲಿ: ಮೇ 19ಕ್ಕೆ  ನಿಗದಿಯಾಗಿರುವ ಗೋವಾದ ಪಣಜಿ ವಿಧಾನಸಭೆ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತಮ್ಮ ಅಭ್ಯರ್ಥಿಯನ್ನು ಘೋಷಿಸಿದೆ. ಗೋವಾದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎನ್ನಲಾಗಿತ್ತು. ಆದರೆ ಅವರ ಬದಲಿಗೆ ಮಾಜಿ ಶಾಸಕರಾದ ಸಿದ್ಧಾರ್ಥ್ ಕುಂಕುಲೇನಕರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇದೇ ಮಾರ್ಚ್ 17ರಂದು ಅಸುನೀಗಿದ್ದ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಪರಿಕ್ಕರ್ ಹಿರಿಯ ಪುತ್ರ ಉತ್ಪಲ್ ಪರಿಕ್ಕರ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. 
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಕಾರ್ಯದರ್ಶಿ ಜಗತ್ ಪ್ರಕಾಶ್ ನಡ್ಡಾ ಭಾನುವಾರ ಮಧ್ಯಾಹ್ನ ಕುಂಕುಲೇನಕರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಕುಂಕುಲೇನಕರ್ 2017ರ ಮೇ 10ರಂದು ಬಿಜೆಪಿ ಹಿರಿಯ ನಾಯಕ ಮನೋಹರ ಪರಿಕ್ಕರ್ ಅವರಿಗೆ ವಿಧಾನಸಭೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗೋವಾ ವಿಧಾನಸಭೆಯಲ್ಲುಇ ಬಿಜೆಪಿ ಸರಳ ಬಹುಮತವನ್ನು ಕಳೆದುಕೊಂಡ ನಂತರ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾತ್ವಾರಾವಾಡಿ ಗೋಮಂತಕ್ ಪಾರ್ಟಿ ಮತ್ತು ಇತರೆ ಸ್ವತಂತ್ರ ಅಭ್ಯರ್ಥಿಗಳ ಜತೆ ಸೇರಿ ಕೇಂದ್ರ  ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕ್ಕರ್ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು..
SCROLL FOR NEXT