ಆಗ್ರಾ: ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಯೋಗ್ಯವಾದ ಪ್ರತ್ಯುತ್ತರವನ್ನು ನೀಡುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದಲೇ ಸಾಧ್ಯ. ಭಯೋತ್ಪಾದನೆಯನ್ನು ಮೂಲೋಚ್ಚಾಟನೆ ಮಾಡಬೇಕಾದಲ್ಲಿ ಈ ಚುನಾವಣೆಯಲ್ಲಿ ನಿಮ್ಮ ಬೆಂಬಲ ಬೇಕಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮಾರ್ಚ್ 10ರಂದು ಲೋಕಸಭೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ "ವಿಜಯ್ ಸಂಕಲ್ಪ್" ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿ ದೇಶದ ಭದ್ರತೆಗೆ ಗಮನ ನೀಡುವುದಿಲ್ಲ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ದೇಶದ ಸುಭದ್ರತೆಯ ಪರ ಕಾಳಜಿ ಹೊಂದಿದೆ ಎಂದರು.
ಪಾಕಿಸ್ತಾನದ ಬಾಲಾಕೋಟ್ ನಲ್ಲಿ ನಡೆದ ಭಯೋತ್ಪಾದನಾ ಶಿಬಿರದ ಮೇಲಿನ ವಾಯುದಾಳಿಯನ್ನೇ ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಶಸ್ತ್ರ ಪಡೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಅವರು ದೂರಿದರು. "ನೀವು ಮತ ಬ್ಯಾಂಕ್ ರಾಜಕೀಯ ನಡೆಸುತ್ತೀರಾ? ರಾಹುಲ್ ಗಾಂಧಿಯವರೇ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಬೇಡಿ" ಎಂದು ಅವರು ಹೇಳಿದರು.
ಬಿಜೆಪಿಯು ವಾಯುದಾಳಿಯನ್ನು ರಾಜಕೀಯವಾಗಿಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಮತ್ತು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿಟ್ರೋಡಾ ಅವರ ವಿವಾದಾತ್ಮಕ ಟೀಕೆಗಳಿಗೆಶಾ ಪ್ರತಿಟೀಕೆ ಮಾಡಿದ್ದಾರೆ
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ಅವರಂತಹ ಪ್ರತಿಪಕ್ಷ ನಾಯಕರು ಮೋದಿವನ್ನು ಸೋಲಿಸಲು "ಕನಸು ಕಾಣುತ್ತಿದ್ದಾರೆ" ಆದರೆ ಅವರಿಗಾರಿಗೂ ಲೋಕಸಭಾ ಚುನಾವಣೆ ಎದುರಿಸುವ ಧೈರ್ಯವಿಲ್ಲ. ಮೋದಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು50 ಕೋಟಿ ಬಡಜನರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಶಾ ಹೇಳೀದ್ದಾರೆ.
ಜಾತಿ ರಾಜಕಾರಣವನ್ನು ತಿರಸ್ಕರಿಸಲು ಕರೆ ನೀಡಿದ ಶಾ "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಗಾಗಿ ಮೋದಿ ಅವರಿಗೆ 2014ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಿಸಿ ಕೊಡಬೇಕೆಂದು ಶಾ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics