ಪಣಜಿ: ಗೊಆವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಕ್ಷೇತ್ರ ಪಣಜಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆ ಗೆಲುವು ದಕ್ಕಿದೆ. 25 ವರ್ಷಗಳ ಕಾಲ ಪಣಜಿ ವಿಧಾನಸಬೆ ಕ್ಷೇತ್ರವನ್ನು ಪರಿಕ್ಕರ್ ಪ್ರತಿನಿಧಿಸಿದ್ದೂ ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಟನಸಿಯೋ ಮೊನ್ನೆರ್ರೇಟ್ ಬಿಜೆಪಿಯ ಸಿದ್ದಾರ್ಥ್ ಕುನ್ನಲಿಯಂಕರ್ ವಿರುದ್ಧ ಜಯ ಗಳಿಸಿದ್ದಾರೆ.
ಅಟನಸಿಯೋ ಅವರು ಸಿದ್ದಾರ್ಥ್ ವಿರುದ್ಧ 1758 ಮತಗಳ ಅಲ್ಪ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 8,748ಮತಗಳು ಲಭಿಸಿದರೆ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಗೆ 6,990 ಮತ ಬಂದಿತ್ತು.
ಇದೇ ವೇಳೆ ಶಿರೋಡಾ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುಭಾಷ್ ಶಿರೋಡ್ಕರ್ ಜಯ ಸಾಧಿಸಿದ್ದಾರೆ. ಅವರು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ದೀಪಕ್ ಧವಳೀಕರ್ ವಿರುದ್ಧ 66 ಮತಗಳ ಅತ್ಯಲ್ಪ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಪಣಜಿ ಕ್ಷೇತ್ರದ ಶಾಸಕರಾಗಿ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಕಳೆದ ಮಾರ್ಚ್ ನಲ್ಲಿ ನಿಧನರಾದ ನಂತರ ಆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos