ದೇಶ

ಈ ಬಾರಿಯೂ ಬಿಜೆಪಿಯಿಂದ ಲೋಕಸಭೆಗೆ ಮುಸ್ಲಿಂ ಸಂಸದರು ಇಲ್ಲ!

Srinivas Rao BV
ನವದೆಹಲಿ: 17 ನೇ ಲೋಕಸಭೆಗೆ ಹೊಸ ಜನಪ್ರತಿನಿಧಿಗಳು ಆಯ್ಕೆಯಾಗಿದ್ದು, 150 ಮಿಲಿಯನ್ ಮುಸ್ಲಿಮರಿಗೆ ಲೋಕಸಭೆಯಲ್ಲಿರುವುದು ಕೇವಲ 24 ಪ್ರತಿನಿಧಿಗಳಷ್ಟೆ. 
ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.10.5 ರಷ್ಟು ಮುಸ್ಲಿಮರಿದ್ದರೆ, ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ.4.42 ರಷ್ಟಿದೆ. ಅಚ್ಚರಿಯೆಂದರೆ  ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು ಸಂಸತ್ ಗೆ ಆಯ್ಕೆಯಾಗಿದ್ದಾರೆ.
ಆದರೆ ಒಟ್ಟಾರೆ ಮುಸ್ಲಿಂ ಜನಪ್ರತಿನಿಧಿಗಳ ಸಂಖ್ಯೆ  2ಕ್ಕೆ  ಏರಿಕೆಯಾಗಿದ್ದು, 2014 ಕ್ಕಿಂತ ಸುಧಾರಣೆ ಕಂಡಿದೆ.  ಇನ್ನು ಈ ಬಾರಿ ಭರ್ಜರಿ ಬಹುಮತ ಗಳಿಸಿರುವ ಬಿಜೆಪಿಯಿಂದ 2014 ರಂತೆಯೇ ಒಬ್ಬನೇ ಒಬ್ಬ ಮುಸ್ಲಿಂ ಜನಪ್ರತಿನಿಧಿಯೂ ಲೋಕಸಭೆಗೆ ಆಯ್ಕೆಗೊಂಡಿಲ್ಲ. 
ಉತ್ತರ ಪ್ರದೇಶದಿಂದ ಸಂಸತ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಜನಪ್ರತಿನಿಧಿಗಳು ಆಯ್ಕೆಗೊಂಡಿದ್ದು, ಸಮಾಜವಾಗಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದವರಾಗಿದ್ದಾರೆ. ಈ ಪೈಕಿ ಎಸ್ ಪಿ ನಾಯಕ ಆಜಂ ಖಾನ್ ಕೂಡ ಒಬ್ಬರು. 
ಇನ್ನು ಹೆಚ್ಚು ಮುಸ್ಲಿಂ ಜನಪ್ರತಿನಿಧಿಗಳನ್ನು ಆರಿಸಿ ಲೋಕಸಭೆಗೆ ಕಳಿಸಿರುವ ರಾಜ್ಯಗಳ ಪೈಕಿ 2 ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದೆ. ಬಿಹಾರದಿಂದ ಕಳೆದ ಬಾರಿ ನಾಲ್ವರು ಆಯ್ಕೆಗೊಂಡಿದ್ದರೆ ಈ ಬಾರಿ ಈ ಸಂಖ್ಯೆ 2 ಕ್ಕೆ ಕುಸಿದಿದೆ. 
ಕೇರಳ ಹಾಗೂ ಅಸ್ಸಾಂ ನಿಂದ ತಲಾ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ಸಂಸದರಿದ್ದು, ಮಹಾರಾಷ್ಟ್ರದಿಂದ  ಈ ಸಮುದಾಯದಿಂದ ಎಂಐಎಂ ನ ಓರ್ವ ಸಂಸದ ಆಯ್ಕೆಯಾಗಿದ್ದಾರೆ. 
SCROLL FOR NEXT