ಕರ್ನಾಟಕ

ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಲ್ಲಿ 478 ಅಭ್ಯರ್ಥಿಗಳು ಕಣದಲ್ಲಿ - ಸಂಜೀವ್ ಕುಮಾರ್

Nagaraja AB

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಒಟ್ಟು 478 ಅಭ್ಯರ್ಥಿಗಳು ಕಣದಲ್ಲಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

241 ಮಂದಿ ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿದ್ದರೆ 237 ಮಂದಿ ಎರಡನೇ ಹಂತದ ಚುನಾವಣಾ ಕಣದಲ್ಲಿದ್ದಾರೆ. ರಾಜ್ಯದಲ್ಲಿ 5.11 ಕೋಟಿ ಅರ್ಹ ಮತದಾರರಿದ್ದಾರೆ. ಈ ಪೈಕಿ 2.58 ಪುರುಷ ಹಾಗೂ 2. 52 ಕೋಟಿ ಮಹಿಳಾ ಮತದಾರರು,  4661 ಇತರ ಮತದಾರರಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು  ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 28. 48 ಲಕ್ಷ ಮತದಾರರಿದ್ದಾರೆ. ಉಡುಪಿ- ಚಿಕ್ಕಮಗಳೂರು  ಕ್ಷೇತ್ರದಲ್ಲಿ ಅತಿ ಕಡಿಮೆ 15. 13 ಲಕ್ಷ ಮತದಾರರಿದ್ದಾರೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಬೆಳಗಾವಿಯಲ್ಲಿ ಅತಿ ಹೆಚ್ಚಿನ ಮಂದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ರಾಯಚೂರಿನಲ್ಲಿ ಕೇವಲ 5 ಮಂದಿ ಮಂದಿ ಸ್ಪರ್ಧಿಸಿದ್ದಾರೆ.

1.512 ಫ್ಲೇಯಿಂಗ್ ಸ್ಕ್ವಾಡ್, 1837  ಸ್ಟಾಟಿಕ್  ಜಾಗೃತ ತಂಡಗಳು, 320 ಅಬಕಾರಿ ತಂಡಗಳು ಹಾಗೂ 180 ವಾಣಿಜ್ಯ ತೆರಿಗೆ ತಂಡಗಳು ಚುನಾವಣೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಅಬಕಾರಿ ತಂಡ 7.88 ಲಕ್ಷ ಲೀಟರ್ ಮದ್ಯ ಹಾಗೂ 14. 077 ಕೆಜಿ ಮಾದಕ ದ್ರವ್ಯ, 1.088 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಸಿಆರ್ ಪಿಸಿ ಕಾಯ್ದೆಯಡಿ ಸುಮಾರು 43, 526 ಕೇಸ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಮತಗಟ್ಟೆಗಳ ಬಳಿ ತೆರಳಿದಾಗ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ತೋರಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಾತ್ರಿಗೊಳಿಸಿಕೊಂಡ  ನಂತರ ಮತ ಚಲಾಯಿಸಬಹುದು ಎಂದು ಅವರು ಹೇಳಿದ್ದಾರೆ.

SCROLL FOR NEXT