ಕರ್ನಾಟಕ

ಆರ್ ಎಸ್ ಎಸ್ ಅಭ್ಯರ್ಥಿಗಳಿಗೆ ಮಣೆ: ರಾಯಚೂರು, ಚಿಕ್ಕೋಡಿಯಲ್ಲಿ ಅಸಮಾಧಾನ; ಬಿಸಿಲ ಬೇಗೆಯ ಜೊತೆಗೆ ಬಂಡಾಯದ ಕುದಿ!

Shilpa D
ಬೆಳಗಾವಿ: ಲೋಕಸಭೆ ಚುನಾವಣೆ 2019ರ ಹುರಿಯಾಳುಗಳ 12ನೇ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದೆ. ರಾಜ್ಯದ ಬಾಕಿಯಿದ್ದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು ನಿರೀಕ್ಷೆಯಂತೆ ಸಂಗಣ್ಣ ಕರಡಿ ಕೊಪ್ಪಳ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. 
ಆದರೆ ಚಿಕ್ಕೋಡಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಶಿಫಾರಸ್ಸು ಮಾಡಿದ್ದ ಅಭ್ಯರ್ಥಿಗೆ ಟಿಕೆಟ್ ನೀಡದಿರುವುದು ಬೇಸರ ತರಿಸಿದೆ, ಹೀಗಾಗಿ ಬಿಜೆಪಿಗೆ ಸಾಮೂಹಿಕ ಬಂಡಾಯ ಎದುರಿಸುವ ಸಾಧ್ಯತೆಯಿದೆ, ಆರ್ಎಸ್ ಎಸ್ ಶಿಫಾರಸ್ಸು ಮಾಡಿದ ಅಭ್ಯರ್ಥಿಗೆ ಟಿಕೆಟ್ ನೀಡಿರುವ ಬಿಜೆಪಿ ಹೈಕಮಾಂಡ್ ಜನಪ್ರಿಯ ನಾಯಕರನ್ನು ಕಡೆಗಣಿಸಿದೆ. 
ಆಘಾತಗೊಂಡಿರುವ ಕತ್ತಿ ಸಹೋದರರು ಪಕ್ಷದ ನಿರ್ಧಾರ ಒಪ್ಪಿಕೊಳ್ಳಲು ಮುಂದಾಗಿದ್ದಾರೆ, ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಯಡಿಯೂರಪ್ಪ ಅವರ ನಿರ್ಧಾರವನ್ನು ಪರಿಗಣಿಸುವಂತೆ ಬಿಜೆಪಿ ಹೈಕಮಾಂಡ್ ಮನವಿ ಮಾಡಿದ್ದಾರೆ, ಆದರೆ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ, ಇಂದಿಗೂ ನಾವು ರಮೇಶ್ ಕತ್ತಿ ಅವರೇ ಅಭ್ಯರ್ಥಿ ಎಂದು ತಿಳಿದಿದ್ದಾರೆ ಎಂದು ಉಮೇಶ್ ಕತ್ತಿ ಸಹೋದರ ರಮೇಶ್ ಹೇಳಿದ್ದಾರೆ. ಏಪ್ರಿಲ್ 4 ರವರೆಗೂ ಕಾಯುವುದಾಗಿ ತಿಳಿಸಿದ್ದಾರೆ,
ತಮ್ಮ ಸಹೋದರಗಿನೆ ಟಿಕೆಟ್ ತಪ್ಪುವಲ್ಲಿ ಹಣ ಪ್ರಮುಖವಾಗಿ ಕೆಲಸ ಮಾಡಿದೆ, ಜೊಳ್ಳೆ ಅವರು ಆರ್ ಎಸ್ ಎಸ್ ಬೆಂಬಲಿಗರು,  ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಜೊಳ್ಳೆ  ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರಲಿಲ್ಲ, ಆದರೂ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. 
ರಾಯಚೂರಿನಿಂದ ಆರ್ ಎಸ್ ಎಸ್ ಬೆಂಬಲಿತ ಅಭ್ಯರ್ಥಿಯಾಗಿರುವ ರಾಜಾ ಅಮರೇಶ್ ನಾಯಕ್  ಅವರಿಗೆ ಟಿಕೆಟ್ ಕೊಡಲಾಗಿದೆ,ಟಿಕೆಟ್ ಗಾಗಿ ಸ್ಥಳೀಯ ನಾಯಕರ ಜೊತೆಗೂಡಿ ಅವರು ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಇನ್ನೂ  ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡಲಾಗಿದೆ, ಕೊನೆ ಕ್ಷಣದಲ್ಲಿ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ.
SCROLL FOR NEXT