ಕರ್ನಾಟಕ

ಸೋಲಿನಿಂದ ಪ್ರತಿಪಕ್ಷಗಳು ಪಾಠ ಕಲಿಯುವ ವಿಶ್ವಾಸವಿದೆ: ರೋಷನ್ ಬೇಗ್

Nagaraja AB

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  ಪ್ರಚಂಡ ಜಯಭೇರಿ ಬಾರಿಸಿರುವುದಕ್ಕೆ ಕಾಂಗ್ರೆಸ್ ಅಸಮಾಧಾನಿತ ಶಾಸಕ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಲಿನಿಂದ ಪ್ರತಿಪಕ್ಷಗಳು ಪಾಠ ಕಲಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಚಂಡ ಗೆಲುವು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ  ಅಭಿನಂದನೆ ಸಲ್ಲಿಸುತ್ತೇನೆ. ದೇಶದ ಬೆಳವಣಿಗೆಯ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಎಲ್ಲಾ ಪ್ರತಿಪಕ್ಷಗಳು ತಮ್ಮ ಸೋಲಿನ ಬಗ್ಗೆ ಪಾಠ ಕಲಿಯುವ ವಿಶ್ವಾಸವಿದೆ ಎಂದು ಅವರು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ರೋಷನ್ ಬೇಗ್,  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಅವರನ್ನು ಬಪೂನ್ ಎಂದು ಕರೆದಿದ್ದರಲ್ಲದೇ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದಾಗಿಯೇ ಕಾಂಗ್ರೆಸ್ ಪಕ್ಷ ಹಾಳಾಯಿತು ಎಂದು ಆರೋಪಿಸಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ  ಒಂದು ವಾರಗಳೊಳಗೆ ಉತ್ತರಿಸುವಂತೆ ಕಾಂಗ್ರೆಸ್ ಪಕ್ಷ ನೋಟಿಸ್ ನೀಡಿದೆ. ಆದರೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ರೋಷನ್ ಬೇಗ್, ಕ್ರಿಶ್ಚಿಯನ್ ರಿಗೆ ಟಿಕೆಟ್ ನಿರಾಕರಣೆ ಹಾಗೂ ರಾಜ್ಯದಲ್ಲಿ ಮುಸ್ಲಿಂರಿಗೆ ಒಂದೇ ಒಂದು ಸೀಟನ್ನು  ಅಸಮಾಧಾನಗೊಂಡು ಆ ರೀತಿಯ ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.

SCROLL FOR NEXT