ಕರ್ನಾಟಕ

ಯಾರಿಗೆ ಸಚಿವ ಸ್ಥಾನ ಎಂಬುದನ್ನು ಮೋದಿ ನಿರ್ಧರಿಸುತ್ತಾರೆ: ತೇಜಸ್ವಿನಿ ಅನಂತ್ ಕುಮಾರ್

Sumana Upadhyaya
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್​ಕುಮಾರ್ ಹರ್ಷವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಾಗೂ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಶೇಕಡಾ 52 ಫಲಿತಾಂಶವನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಕೇಂದ್ರ ಮಂತ್ರಿ ಮಂಡಲದ ಸಹೋದ್ಯೋಗಿಗಳು ಅನಂತ್ ಕುಮಾರ್ ಅವರು ಇದ್ದಿದ್ದರೆ ಎಷ್ಟು ಸಂತೋಷಪಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಈ ಒಂದು ಜಯಕ್ಕೆ 1987ರಿಂದ ನಿರಂತರವಾಗಿ ಅನಂತ್ ಕುಮಾರ್ ಅವರು ಮತ್ತು ಯಡಿಯೂರಪ್ಪನವರು ನಿರಂತರವಾಗಿ ಪಕ್ಷವನ್ನು ಸಂಘಟಿಸುತ್ತಾ ಹೋರಾಡಿಕೊಂಡು ಬಂದಿದ್ದಾರೆ. ದೇಶದಲ್ಲಿ ಶೇಕಡಾ 2ರಷ್ಟಿದ್ದ ಬಿಜೆಪಿಯ ಸಂಸದರ ಸಂಖ್ಯೆ ಇಂದು ಶೇಕಡಾ 52ಕ್ಕೆ ತಲುಪಿರುವುದು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ನಿರಂತರ ಪ್ರಯತ್ನದಿಂದ ಆಗಿದೆ ಎಂದರು.
ಅನಂತಕುಮಾರ್ ಅವರನ್ನು ಸಹೋದ್ಯೋಗಿಗಳು ನೆನಪಿಸಿಕೊಂಡಿದ್ದಾರೆ, ಇದಕ್ಕಾಗಿ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ, ಅನಂತಕುಮಾರ್ ಯಾವಾಗಲೂ ದೇಶದ ಬಗ್ಗೆ ಚಿಂತಿಸುತ್ತಿದ್ದರು. ಅವರ ಶೂನ್ಯವನ್ನು ಇವರೇ ತುಂಬುತ್ತಾರೆ ಎಂದು  ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. 
SCROLL FOR NEXT