ಕರ್ನಾಟಕ

ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ: ಸುರೇಶ್ ಅಂಗಡಿ

Raghavendra Adiga
ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದ ಮುನಿಸ್ವಾಮಿ ತಮ್ಮ ಕ್ಷೇತ್ರದಿಂದ ಆರು ಶಾಸಕರನ್ನು ಆಯ್ಕೆ ಮಾಡಿಸಿ ವಿಧಾನಸಭೆಗೆ ಕಳಿಸುತ್ತೇನೆ. ಈ ಮೂಲಕ ಯಡಿಯೂರಪ್ಪ ಅವರುಗೆ ಮುಖ್ಯಮಂತ್ರಿ ಗಾದಿಯನ್ನು ಸುಲಭಗೊಳಿಸುತ್ತೇನೆ ಎಂದಿದ್ದಾರೆ.
"ಒಂದು ವಾರದೊಳಗೆ ರಾಜ್ಯ ರಾಜಕಾರಣದಲ್ಲಿ ಹಲವು ಬದಲಾವಣೆಗಳಾಗಲಿದೆ" ಅವರು ಹೇಳಿದ್ದಾರೆ.
ಅದಾಗ್ಯೂ ಬೇರೆ ಪಕ್ಷದ ಯಾರ್ಯಾರು ಬಿಜೆಪಿಗೆ ಸೇರಲಿದ್ದಾರೆ ಎಂಬ ಬಗ್ಗೆ ಹೆಸರು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಇದೇ ವೇಳೆ ಇನ್ನೋರ್ವ ನೂತನ ಸಂಸದ ಸುರೇಶ್ ಅಂಗಡಿ ಸಹ ರಾಜ್ಯ್ ರಾಜಕೀಯದ ಬದಲಾವಣೆ ಬಗೆಗೆ ಮಾತನಾಡಿದ್ದಾರೆ.ಹಲವು ಕಾಂಗ್ರೆಸ್ ಶಾಸಕರು ಕೇಸರಿ ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದಾರೆ ಎಂದು ವರು ಹೇಳಿದರು.
ಬೆಳಗಾವಿ ಸೇರಿದಂತೆ ಹಲವು ಭಾಗಗಳ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಲಿದ್ದಾರೆ."ಈ ಬಾರಿ ಗೊಕಾಕ್ ವಿಧಾನಸಭೆ ವಿಭಾಗದಿಂದ ಅತೀ ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆಯಲು ನನಗೆ ಸಹಾಯ ಮಾಡಿದ್ದಕ್ಕಾಗಿ ಕಾಂಗ್ರೆಸ್ ಶಾಸಕ ರಮೇಶ್  ಜಾರಕಿಹೋಳಿ ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ.ರಮೇಶ್ ಕಾಂಗ್ರೆಸ್ ನಲ್ಲಿದ್ದರೂ ನಾನು ಃಆಗೂ ಅವರ ನಡುವೆ ಉತ್ತಮ ಸ್ನೇಹವಿದೆ.
"ಅವರು ನನಗಿಂತ ಹೆಚ್ಚು ರಾಜಕೀಯ ಕಂಡವರು. ದುರದೃಷ್ಟವಶಾತ್, ಅವರ ಪಕ್ಷವು ಅವರಂತಹಾ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿದೆ.'' ಎಂದು ಆಂಗಡಿ ಹೇಳಿದರು.
ಲೋಕಸಭೆ ಚುನಾವಣೆ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದಲ್ಲಿಲ್ ಮುಂದುವರಿಯಲು ಹಿಂದೇಟು ಹಾಕಿದ್ದಾರೆ ಎಂದ ಅಂಗಡಿ" ರಮೇಶ್ ನೇತೃತ್ವದಲ್ಲಿ ಬೆಳಗಾವಿಯ ಎಲ್ಲಾ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಶೀಘ್ರವೇ ಬಿಜೆಪಿಯನ್ನು ಸೇರಿಕೊಳ್ಳುತ್ತಿದ್ದಾರೆ" ಎಂದು ಹೇಳಿದರು.
ಕಾಂಗ್ರೆಸ್ ಭಿನ್ನಮತೀಯರ ಸಹಕಾರದೊಡನೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದ " ಅದನ್ನು ಯಡಿಯೂರಪ್ಪ, ಜಗದೀಶ್ ಶೆಟ್ತರ್ ಮೊದಲಾದ ಹಿರಿಯ ನಾಯಕರು ನಿರ್ಧರಿಸುತ್ತಾರೆ" ಎಂದರು.
SCROLL FOR NEXT