ಬೆಂಗಳೂರು: ಮಾಜಿ ಸಂಸದೆ ರಮ್ಯಾ ಅವರಿಗೆ ಸಚಿವ ಸ್ಥಾನವಷ್ಟೇ ಅಲ್ಲ ಮುಖ್ಯಮಂತ್ರಿ ಪದವಿ ನೀಡಿದರೂ ಸಂತೋಷ...! ಇದು ವಸತಿ ಸಚಿವ ಅಂಬರೀಷ್ ಅವರ ಅಭಿಪ್ರಾಯ.
ರಮ್ಯಾ ಸೋಲಿಗೆ ಅಂಬರೀಷ್ ಕಾರಣ ಎಂಬ ಆರೋಪದ ಮಧ್ಯೆಯೇ ಅವರಿಗೆ ಸಚಿವ ಸ್ಥಾನ ನೀಡುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ರಮ್ಯಾ ಸೋಲಿಗೆ ನಾನು ಕಾರಣವಲ್ಲ. ದೇಶಾದ್ಯಂತ ಮೋದಿ ಅಲೆ ಇದ್ದರೂ ಮಂಡ್ಯದಲ್ಲಿ ನಾವು ಬಿಜೆಪಿ ಅಭ್ಯರ್ಥಿಯ ಠೇವಣಿ ಕಳೆದಿದ್ದೇವೆ. ಹೀಗಾಗಿ ಕಾಂಗ್ರೆಸ್ ಸೋಲಿಗೆ ನಾನು ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಚುನಾವಣೆ ಜೂಜಾಟವಿದ್ದಂತೆ. ನಾನು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಮುಂದಿನ ಚುನಾವಣೆಗಳಲ್ಲಿ ರಮ್ಯಾ ಅತ್ಯಧಿಕ ಮತಗಳಿಂದ ಗೆಲ್ಲಬಹುದು ಎಂದು ಹೇಳಿದರು.