ಸಂಗ್ರಹ ಚಿತ್ರ 
ಫೀಫಾ ವಿಶ್ವ ಕಪ್ 2018

ದಾಖಲೆ ಬರೆಯಲಿದ್ದಾರಾ ರೊನಾಲ್ಡೋ?; ಫುಟ್ಬಾಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಆಟಗಾರನ ಮಾರಾಟ

ಪೋರ್ಚುಗಲ್ ತಂಡದ ನಾಯಕ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಕ್ರಿಸ್ಚಿಯಾನೋ ರೊನಾಲ್ಡೋ ಆ ತಂಡವನ್ನು ತೊರೆದು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

ಮಾಸ್ಕೋ: ಪೋರ್ಚುಗಲ್ ತಂಡದ ನಾಯಕ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಕ್ರಿಸ್ಚಿಯಾನೋ ರೊನಾಲ್ಡೋ ಆ ತಂಡವನ್ನು ತೊರೆದು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ನ ನಾಕೌಟ್ ಹಂತದಲ್ಲಿ ಪೋರ್ಚುಗಲ್ ತಂಡ ಹೊರಬಿದ್ದ ಬೆನ್ನಲ್ಲೇ ಇದೀಗ ಎಲ್ಲ ಆಟಗಾರರ ಚಿತ್ತ ಕ್ಲಬ್ ಟೂರ್ನಿಗಳತ್ತ ನೆಟ್ಟಿದೆ. ಏತನ್ಮಧ್ಯೆ ಫುಟ್ಬಾಲ್ ಲೋಕದಲ್ಲಿ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಕ್ರಿಸ್ಚಿಯಾನೋ ರೊನಾಲ್ಡೋ ತಮ್ಮ ತಂಡವನ್ನು ತೊರೆದು ಇಟಲಿ ಮೂಲದ ಜುವೆಂಟಸ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ. 
ಮೂಲಗಳ ಪ್ರಕಾರ ರೊನಾಲ್ಡೋ ಮತ್ತು ಜುವೆಂಟಸ್ ತಂಡದ ಆಡಳಿತ ಮಂಡಳಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿದ್ದು, ಕೇವಲ ಅಧಿಕೃತವಾಗಿ ಒಪ್ಪಂದಕ್ಕೆ ಸಹಿಹಾಕುವುದು ಮಾತ್ರ ಬಾಕಿ ಇದೆ ಎನ್ನಲಾಗಿದೆ. ರಿಯಲ್ ಮ್ಯಾಡ್ರಿಡ್ ತಂಡದ ಸಾರ್ವಕಾಲಿಕ ಅತ್ಯಧಿಕ ಗೋಲು ಬಾರಿಸಿದ ಆಟಗಾರ ರೊನಾಲ್ಡೋ ದಿಢೀರ್ ತಮ್ಮ ತಂಡವನ್ನು ತೊರೆಯಲು ಕಾರಣವೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ. 
ಈ ಬಗ್ಗೆ ಖ್ಯಾತ ಫುಟ್ಬಾಲ್ ಸುದ್ದಿಗಳ ವೆಬ್ ಸೈಟ್ ಗೋಲ್ ಡಾಟ್ ಕಾಮ್ ಈ ಬಗ್ಗೆ ವರದಿ ಮಾಡಿದ್ದು, ರಿಯಲ್ ಮ್ಯಾಡ್ರಿಡ್ ತಂಡದೊಂದಿಗೆ ರೊನಾಲ್ಡೋ ರವಾನೆ ಕುರಿತಂತೆ ಮಾತುಕತೆ ನಡೆಸಿದೆ ಎನ್ನಲಾಗಿದೆ. ಒಂದು ವೇಳೆ ಈ ಒಪ್ಪಂದಕ್ಕೆ ರಿಯಲ್ ಮ್ಯಾಡ್ರಿಡ್ ತಂಡ ಒಪ್ಪಿದ್ದೇ ಆದರೆ ಆಗ ಜುವೆಂಟಸ್ ತಂಡ ರಿಯಲ್ ಮ್ಯಾಡ್ರಿಡ್ ಗೆ ಸುಮಾರು100 ರಿಂದ 120 ಮಿಲಿಯನ್ ಯೂರೋಸ್ (8,05,24,00,000 ರಿಂದ 9,66,25,09,681.50 ರೂ) ಹಣ ನೀಡಬೇಕಾಗುತ್ತದೆ. ಇದೂ ಕೂಡ ಫುಟ್ಬಾಲ್ ಲೋಕದ ಸಂಚಲನಕ್ಕೆ ಕಾರಣವಾಗಿದೆ.
ಫುಟ್ಬಾಲ್ ಇತಿಹಾಸದಲ್ಲೇ ಓರ್ವ ಆಟಗಾರರನ ಖರೀದಿ ಮತ್ತು ಮಾರಾಟಕ್ಕೆ ಇಷ್ಟು ದೊಡ್ಡ ಮೊತ್ತದ ಹಣ ಹರಿದಾಡಿದ ಪ್ರಸಂಗವೇ ಮತ್ತೊಂದು ಇಲ್ಲ. ಇಂತಹುದೊಂದು ಐತಿಹಾಸಿಕ ಘಟನೆಗೆ ರೊನಾಲ್ಡೋ ಕಾರಣವಾಗಿದ್ದಾರೆ.
ರೊನಾಲ್ಡೋಗೆ ಸಿಗಲಿರುವ ಸಂಭಾವನೆ ಎಷ್ಟುಗೊತ್ತಾ?
ಪೋರ್ಚುಗಲ್ ತಂಡ ಈ ಅಪ್ರಮತಿಮ ಆಟಗಾರನಿಗೆಜುವೆಂಟಸ್ ನೀಡಲಿರುವ ಸಂಭಾವನೆ ಕೂಡ ಫುಟ್ಬಾಲ್ ಲೋಕದ ಅಚ್ಚರಿಗೆ ಕಾರಣವಾಗಿದೆ. ವೆಬ್ ಸೈಟ್ ವರದಿ ಮಾಡಿರುವಂತೆ ಜುವೆಂಟಸ್ ತಂಡ ರೊನಾಲ್ಡೋಗೆ ಭಾರಿ ಮೊತ್ತದ ಸಂಭಾವನೆ ನೀಡಲಿದ್ದು, ಮೂಲಗಳ ಪ್ರಕಾರ ರೊನಾಲ್ಡೋ ಟೂರ್ನಿಯೊಂದಕ್ಕೆ ಬರೊಬ್ಬರಿ 30 ಮಿಲಿಯನ್ ಯೂರೋಸ್ (ಸುಮಾರು 2,41,54,80,000.00) ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ